ಯಡಿಯೂರಪ್ಪರನ್ನ ಕೆಳಗಿಳಿಸಲು ಶಾ-ಮೋದಿ ಸಂಚು – ಸಿದ್ದರಾಮಯ್ಯ ಶಂಕೆ

ನೆರೆ ಪರಿಹಾರ ನೀಡದೇ ಯಡಿಯೂರಪ್ಪರನ್ನು ಅಸಹಾಯಕಗೊಳಿಸಿ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಲು ಮೋದಿ ಮತ್ತು ಶಾ ಹುನ್ನಾರ ಮಾಡಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪನವರು ಯಾವುದೇ ಪಕ್ಷದಿಂದ ಆರಿಸಿಬಂದು ಮುಖ್ಯಮಂತ್ರಿಗಳಾಗಿರಬಹುದು. ಆದರೆ ಒಬ್ಬ ಮುಖ್ಯಮಂತ್ರಿಯನ್ನು ವೇದಿಕೆ ಮೇಲೆಯೇ ನಿರ್ಲಕ್ಷಿಸಿ ಅವಮಾನಿಸಿರುವುದು ರಾಜ್ಯದ ಆರುವರೆ ಕೋಟಿ ಜನತೆಗೆ ಮಾಡಿರುವ ಅವಮಾನ ಎನ್ನವುದು ನನ್ನ ಅಭಿಪ್ರಾಯ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವುದು ಅವರದ್ದೇ ಪಕ್ಷದಲ್ಲಿರುವ ಒಂದು ಗುಂಪಿಗೆ ಇಷ್ಟ ಇಲ್ಲ ಎನ್ನುವ ಮಾಧ್ಯಮ ವರದಿಗಳು ನಿಜವಿರಬಹುದು ಎಂದು ನನಗನಿಸುತ್ತಿದೆ. ಯಡಿಯೂರಪ್ಪನವರನ್ನು ದುರ್ಬಲಗೊಳಿಸಿ, ಅಸಹಾಯಕಗೊಳಿಸಿ, ಪದಚ್ಯುತಿ ಮಾಡುವ ಯೋಜನೆಯೇನಾದರೂ ಮೋದಿ-ಶಾ ಜೋಡಿಗೆ ಇರಬಹುದೇನೋ? ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here