ಮೋದಿ ಪರಮಾಪ್ತ ಅಮಿತ್ ಷಾಗೆ ಮತ್ತೆ ಕೈಕೊಟ್ಟ ಆರೋಗ್ಯ..

ವಾರದ ಹಿಂದಷ್ಟೇ ಕೊರೋನಾ ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಮತ್ತೆ ಆರೋಗ್ಯ ಕೈಕೊಟ್ಟಿದ್ದು, ಈ ಬಾರಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಮೂರ್ನಾಲ್ಕು ದಿನದಿಂದ ಅಮಿತ್ ಷಾ ಅವರಿಗೆ ತೀವ್ರ ಸುಸ್ತು ಮತ್ತು ಬಾಡಿ ಪೇನ್ ಇದೆ. ಕೊರೋನಾ ಟೆಸ್ಟ್ ನಲ್ಲಿ ನೆಗೆಟೀವ್ ರಿಪೋರ್ಟ್ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಅಮಿತ್ ಷಾರನ್ನು ಏಮ್ಸ್ ಗೆ ದಾಖಲಿಸಲಾಗಿದೆ.

ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ನೇತೃತ್ವದ ತಜ್ಞರ ತಂಡ ಅಮಿತ್ ಷಾ ಅವರಿಗೆ ಚಿಕಿತ್ಸೆ ನೀಡುತ್ತಿದೆ.

ಏಮ್ಸ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಪ್ರಕಾರ, ಅಮಿತ್ ಷಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರು ಆಸ್ಪತ್ರೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ.

ಆಗಸ್ಟ್ 2ರಂದು ಷಾಗೆ ಕೊರೋನಾ ಸೋಂಕು ತಗುಲಿತ್ತು. ವೈದ್ಯರ ಸೂಚನೆ‌ ಮೇರೆಗೆ ಅಮಿತ್ ಷಾ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್‌ 14 ರಂದು ಅವರು ಬಿಡುಗಡೆ ಆಗಿ ಮನೆಗೆ ಮರಳಿದ್ದರು.

LEAVE A REPLY

Please enter your comment!
Please enter your name here