ಮೊದಲ ಮಗು ನಿರೀಕ್ಷೆಯಲ್ಲಿ ಸೆಲೆಬ್ರಿಟಿ ಕಪಲ್ ಸಮೀರ್ ಆಚಾರ್ಯ ದಂಪತಿ

ಬಿಗ್ ಬಾಸ್ ಮತ್ತು ರಾಜಾ ರಾಣಿ ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಖುಷಿ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶ್ರಾವಣಿ ಹಂಚಿಕೊಂಡಿದ್ದು, ಜೀವನ ಹೊಸ ಅಧ್ಯಾಯ ಆರಂಭವಾಗಿದೆ’ ಎಂದು ಮಗುವಿನ ಆಗಮನದ ಬಗ್ಗೆ ಬರೆದುಕೊಂಡಿದ್ದಾರೆ.

ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಶ್ರಾವಣಿಗೆ ಅವರಿಗೆ ಸೀಮಂತ ಮಾಡಲಾಗಿದ್ದು, ಜೋಕಾಲಿಯಲ್ಲಿ ದಂಪತಿಗಳಿಬ್ಬರು ಕುಳಿತು ಹಿರಿಯರು ಹಾಡುತ್ತಿರುವ ವೀಡಿಯೋ ಶೇರ್ ಮಾಡಿದ್ದಾರೆ.

https://www.instagram.com/reel/CkbbgcHA-j3/?igshid=YmMyMTA2M2Y=

ಅಪ್ಪ ಅಮ್ಮ ಆಗುವ ಖುಷಿಯಲ್ಲಿರುವ ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಮಹಾಪುರವೇ ಹರಿದು ಬಂದಿದ್ದು, ಅವರ ಫಾಲೋವರ್ಸ್ ಮತ್ತು ಸಿನಿ ಸ್ನೇಹಿತರು ಶುಭ ಹಾರೈಸಿದ್ದಾರೆ.

ಇನ್ನೂ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಭಾಗವಹಿಸಿದ್ದ ಸಮೀರ್ ಆಚಾರ್ಯ ಅವರು ಆ ಸೀಸನ್ ನಲ್ಲಿ ಬರೋಬ್ಬರಿ ತೊಂಭತ್ತೊಂಭತ್ತು ದಿನ ಬಿಗ್ ಬಾಸ್ ಮನೆಯಲ್ಲಿದ್ದು ನಂತರ ಎಲಿಮಿನೇಟ್ ಆಗಿ ಹೊರ ನಡೆದಿದ್ದರು.. ಟಾಪ್ ಆರನೇ ಸ್ಪರ್ಧಿಯಾಗುವಲ್ಲಿ ಯಶಸ್ವಿಯಾಗಿದ್ದರು.

ಬಳಿಕ ಕಲರ್ಸ್ ಕನ್ನಡ ವಾಹಿನಿಯ ರಾಜಾರಾಣಿ ಸೀಜನ್ ಫಸ್ಟ್ ರಲ್ಲಿ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ  ಸ್ಪರ್ಧಿಗಳಾಗಿ ಪಾಲ್ಗೊಂಡಿದ್ದರು.ಈ ವೇದಿಕೆಯಲ್ಲಿ ಶ್ರಾವಣಿ ತಮಗೆ ಮಿಸ್ ಕ್ಯಾರೇಜ್‌ ಆಗಿದ್ದನ್ನು ನೆನಪಿಸಿ ಕೊಂಡು ಕಣ್ಣೀರು ಹಾಕಿದ್ದರು.