ಮೈಸೂರು ಮೂಲದ ವೈದ್ಯೆಗೆ ಅಮೆರಿಕಾದಲ್ಲಿ ವಿಶಿಷ್ಟ ಗೌರವ

ಕೊರೋನಾ ಮೃತ್ಯು ತಾಂಡವ ಆಡುತ್ತಿರುವ ಅಮೆರಿಕಾದಲ್ಲಿ ಜೀವದ ಹಂಗು ತೊರೆದು ಕೊರೋನಾ ರೋಗಿಗಳ ಸೇವೆ ಮಡುತ್ತಿರುವ ಮೈಸೂರು ಮೂಲದ ವೈದ್ಯೆ ಉಮಾ ಮಧುಸೂಧನ್ ಅವರಿಗೆ ಅಮೆರಿಕಾದಲ್ಲಿ ವಿಶೇಷ ಗೌರವ ದಕ್ಕಿದೆ.

ಅಮೆರಿಕಾದ ಓಕ್‍ಲ್ಯಾಂಡ್‍ನಲ್ಲಿರುವ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಡಾ.ಉಮಾ ಮಧುಸೂಧನ್ ಚಿಕಿತ್ಸೆ ನೀಡುತ್ತಿದ್ದೂ, ನಿನ್ನೆಯಷ್ಟೇ ಮನೆಗೆ ಮರಳಿದ್ದಾರೆ. ಈ ವೇಳೆ ಮನೆಯ ಮುಂದೆ ನಿಂತ ಡಾ.ಉಮಾ ಮಧುಸೂಧನ್ ಅವರಿಗೆ ಡ್ರೈವ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಕೆ ಮಾಡಲಾಗಿದೆ.

ಆಂಬ್ಯುಲೆನ್ಸ್ ಸಿಬ್ಬಂದಿ, ಅಗ್ನಿಶಾಮಕ ಪಡೆಯ ಸಿಬ್ಬಂದಿ, ಸ್ಥಳೀಯ ಆಡಳಿತದ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ತಮ್ಮ ತಮ್ಮ ವಾಹನಗಳಲ್ಲಿ ಸಾಗುತ್ತಲೇ ಡಾ. ಉಮಾ ಮಧುಸೂಧನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮೈಸೂರು ಮೂಲದ ವೈದ್ಯೆಗೆ ಈ ಗೌರವ ಸಿಕ್ಕಿರುವುದಕ್ಕೆ ಸಾಂಸ್ಕøತಿಕ ನಗರಿ ಜನತೆ ಸೇರಿದಂತೆ ರಾಜ್ಯದ ಜನತೆ ಸೋಷಿಯಲ್ ಮೀಡಿಯಾದಲ್ಲಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

Posted by Giriraj BM on Monday, April 20, 2020

LEAVE A REPLY

Please enter your comment!
Please enter your name here