ಲಾಕ್ ಡೌನ್‌ ನಲ್ಲೂ ಕಾರ್ಮಿಕರ ಸಂಪಾದನೆ- ಹೀಗೊಂದು ವಿನೂತನ ಪ್ರಯತ್ನ

ಮೈಸೂರಿನ ಕ್ರೆಡಿಟ್ – ಐ ಸಂಸ್ಥೆ, ಫೆವಾರ್ಡ್ – ಕೆ, ಧ್ವನಿ ಫೌಂಡೇಶನ್ ಹಾಗೂ ಲಯನ್ಸ್ ಕ್ಲಬ್ ಗಳ ಸಹಯೋಗ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಮಾರ್ಗದರ್ಶನದಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ವಲಸೆ ಕಾರ್ಮಿಕರ/ನಿರಾಶ್ರಿತರ ಪುರ್ನವಸತಿ ಕೇಂದ್ರವನ್ನು ನಡೆಸುತ್ತಿದೆ.

ಪುನರ್ವಸತಿ ಕೇಂದ್ರದಲ್ಲಿ ದಿನಕ್ಕೊಂದು ಕಾರ್ಯಕ್ರಮದ ಮೂಲಕ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸುರಕ್ಷಾ ಫೌಂಡೇಶನ್ ನ ಶ್ರೀ ಆನಂದರಾಜ್ ಹಾಗೂ ಶ್ರೀಮತಿ ಶಾರದಾಂಭರವರಿಂದ ಪೇಪರ್ ಕವರ್ ತಯಾರಿಕೆ ತರಬೇತಿ 

ಪುರ್ನವಸತಿ ಕೇಂದ್ರದ ನಿವಾಸಿಗಳಿಗೆ ಆದಾಯೋತ್ಪನ್ನ ಚಟುವಟಿಕೆಯ ಭಾಗವಾಗಿ ಲಾಕ್ ಡೌನ್ ಅವಧಿ ಮುಕ್ತಾಯದ ನಂತರ ಇಲ್ಲಿನ ನಿವಾಸಿಗಳು ಹೊರಹೋಗುವಾಗ ಕನಿಷ್ಟ 2000/- ರೂಪಾಯಿಗಳನ್ನು ಕೊಟ್ಟು ಕಳುಹಿಸುವ ಮೂಲಕ ಅವರಿಗೆ ಕೆಲಸ ಸಿಗುವವರೆಗಿನ ಅವಧಿಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಸ್ವಾಭಿಮಾನ ಹಾಗೂ ಸ್ವತಂತ್ರವಾಗಿ ಕಳೆಯುವಂತೆ ಮಾಡುವ ಗುರಿಯೊಂದಿಗೆ ಕ್ರೆಡಿಟ್ – ಐ ಸಂಸ್ಥೆ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹಯೋಗದಲ್ಲಿ ಇಲ್ಲಿನ ನಿವಾಸಿಗಳಿಗೆ ಸಿಂಗಲ್ ಲೇಯರ್, ಡಬಲ್ ಲೇಯರ್ ಹಾಗೂ ಮೆಡಿಕಲ್ ಶಾಪ್,ಹಾಪ್ ಕಾಮ್ಸ್ ಗಳಲ್ಲಿ ಬಳಸುವ ಪೇಪರ್ ಕವರುಗಳನ್ನು ತಯಾರಿಸುವುದನ್ನು ಕಲಿಸಲಾಗುತ್ತಿದೆ.

ಈಗ ಪುನರ್ವಸತಿಯಲ್ಲಿರುವ ಬಹುತೇಕ ನಿವಾಸಿಗಳು ಪೇಪರ್ ಕವರ್ ತಯಾರಿಕೆಯಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಕೂಲಿ ಇಲ್ಲದೆ ಕಂಗಾಲಾಗಿದ್ದ 93 ಕಾರ್ಮಿಕರಿಗೆ ಇದರಿಂದ ಸ್ವಲ್ಪ ಸಮಾಧಾನ ಸಿಕ್ಕಿದೆ ಎಂದು ಕ್ರೆಡಿಟ್ – ಐ ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಎಂ.ಪಿ ವರ್ಷ ತಿಳಿಸಿದ್ದಾರೆ.

ಹೆಸರಾಂತ ನೃತ್ಯ ನಿರ್ದೇಶಕ ಶ್ರೀ ಸಂತೋಷ ಕಲಾವಿದ ಇವರಿಂದ ನೃತ್ಯ, ನಾಟಕ ಪ್ರದರ್ಶನ.  

LEAVE A REPLY

Please enter your comment!
Please enter your name here