ಮೈಸೂರಿನಲ್ಲಿ ಕೇರೆಹಾವು, ನಾಗರಹಾವು…ಯಾರು?

ಮೈಸೂರಿನಲ್ಲಿ ಕೇರೆಹಾವು…ನಾಗರಹಾವುಗಳಿವೆ ಎಚ್ಚರ….ಕೆಲವು ಹಾವುಗಳು ಕಡಿದ್ರೆ ವಿಷ, ಇನ್ನು ಕೆಲವು ಮೂಸಿದರೆ ವಿಷ…ಹೀಗಾಗಿ ಎಚ್ಚರಿಕೆಯಿಂದ  ಅಧಿಕಾರ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.‌ ಟಿ ಸೋಮಶೇಖರ್‌ ಅವರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಉಚಿತ ಸಲಹೆ ನೀಡಿದ್ದಾರೆ.

ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದ ಸಾ.ರಾ.ಮಹೇಶ್, ಆಹಾರ ಇಲಾಖೆ ಅಧಿಕಾರಿ ಮೂಲಕ ಅಕ್ಕಿ ಯಾರ ಮನೆಗೆ ಹೋಯಿತು..? ಈ ಕುರಿತು ತನಿಖೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆ ಕ್ಷೇತ್ರದ ಶಾಸಕರೇ ಈ ಕುರಿತು ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳನ್ನ ಬಲವಂತವಾಗಿ ವರ್ಗಾವಣೆ ಮಾಡಲಾಗುತ್ತಿದೆ, ಮೈಸೂರು ಅಬಕಾರಿ ಡಿಸಿ ವರ್ಗಾವಣೆಗೆ ನ್ಯಾಯಾಲಯ ತಡೆ ನೀಡಿದೆ
ಇದರಲ್ಲೇ ಗೊತ್ತಾಗುತ್ತದೆ ಯಾವ ಮಟ್ಟಕ್ಕೆ ವರ್ಗಾವಣೆ ನಡೀತಿದೆ ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಮಹೇಶ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here