ಮೈಸೂರಲ್ಲಿ ಉಳಿದಿರುವುದು ಕೇವಲ 4 ಕೊರೋನಾ ಆಕ್ಟೀವ್‌ ಕೇಸಷ್ಟೇ – ರೆಡ್‌ಝೋನ್‌ನಿಂದ ಆರೆಂಜ್‌ಝೋನ್‌ನತ್ತ ನಿರೀಕ್ಷೆ

ಒಂದು ಕಾಲಕ್ಕೆ ಕೊರೋನಾ ಹಾಟ್‌ಸ್ಪಾಟ್‌ ಆಗಿ ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮೈಸೂರು ಜಿಲ್ಲೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಬಹುತೇಕ ಗೆದ್ದಿದೆ. ಇವತ್ತಿನ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಉಳಿದಿರುವ ಸಕ್ರಿಯ ಕೊರೋನಾ ಕೇಸ್‌ಗಳ ಸಂಖ್ಯೆ ಕೇವಲ ನಾಲ್ಕು.

ಇವತ್ತು ಮತ್ತೊಬ್ಬ ಕೊರೋನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. 90 ಕೇಸ್‌ಗಳಲ್ಲಿ ಇಲ್ಲಿವರೆಗೆ 86 ಮಂದಿ ಗುಣಮುಖರಾಗಿದ್ದು ಬಾಕಿ ಉಳಿದಿರುವುದು ಕೇವಲ ನಾಲ್ಕು ಆಕ್ಟೀವ್‌ ಕೇಸ್‌ ಅಷ್ಟೇ.

ಏಪ್ರಿಲ್‌ 28ರಿಂದ ಅಂದರೆ 11 ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ಒಂದೇ ಒಂದು ಹೊಸ ಕೊರೋನಾ ಪಾಸಿಟಿವ್‌ ಕೇಸ್‌ ವರದಿ ಆಗಿಲ್ಲ. ಇವತ್ತೂ ಜಿಲ್ಲೆಯಲ್ಲಿ ಹೊಸ ಕೇಸ್‌ ವರದಿ ಆಗಿಲ್ಲ.

ನಂಜನಗೂಡಲ್ಲಿ ಔಷಧೋತ್ಪನ ಕಾರ್ಖಾನೆ ಮತ್ತು ತಬ್ಲಿಘಿ ಜಮಾತ್‌ ನಂಟಿನಿಂದಾಗಿ ಮೈಸೂರಲ್ಲಿ ಕೊರೋನಾ ಹಾಟ್‌ಸ್ಪಾಟ್‌ ಆಗಿತ್ತು. ಇಡೀ ಕರ್ನಾಟಕದಲ್ಲೇ ಎರಡೇ ಸ್ಥಾನದಲ್ಲಿದ್ದ ಮೈಸೂರು ಸದ್ಯ ರಾಜ್ಯದ ಮೂರು ರೆಡ್‌ಝೋನ್‌ಗಳ ಪೈಕಿ ಒಂದಾಗಿತ್ತು.

ಪ್ರತಿ ಸೋಮವಾರದಿಂದ ಶನಿವಾರಕ್ಕೆ ಅಂದರೆ ವಾರದ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ಕೊರೋನಾ ಝೋನ್‌ಗಳನ್ನು ಪರಿಷ್ಕರಣೆ ಮಾಡುತ್ತದೆ. ಈ ಬಾರಿ ಮೈಸೂರು ರೆಡ್‌ಝೋನ್‌ನಿಂದ ಆರೆಂಜ್‌ಝೋನ್‌ಗೆ ಹೋಗಬಹುದು ಎನ್ನುವ ನಿರೀಕ್ಷೆ ಇದೆ.

 

LEAVE A REPLY

Please enter your comment!
Please enter your name here