ಮೇ 7ರವರೆಗೂ ಲಾಕ್‌ಡೌನ್‌ ವಿಸ್ತರಣೆ – ಪ್ರಧಾನಿ ಮೋದಿ ಹೇಳಿದ್ದಕ್ಕಿಂತ 4 ದಿನ ಹೆಚ್ಚು..!

ಪ್ರಾತಿನಿಧಿಕ ಚಿತ್ರ

ಮೇ 7ರವರೆಗೂ ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆ ಘೋಷಿಸಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್‌ ಆದೇಶ ಹೊರಡಿಸಿದ್ದಾರೆ.

ಮೇ 3ರವರೆಗೆ ದೇಶಾದ್ಯಂತ ಲಾಕ್‌ಡೌನ್‌ ವಿಸ್ತರಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆದೇಶ ಹೊರಡಿಸಿತ್ತು. ಆದ್ರೆ ಮೇ 3ರಂದು ಅಂತ್ಯಗೊಳ್ಳುವ ಲಾಕ್‌ಡೌನ್‌ನ್ನು ರಾಜ್ಯದಲ್ಲಿ ಮತ್ತೆ ನಾಲ್ಕು ದಿನಗಳ ಮಟ್ಟಿಗೆ ವಿಸ್ತರಿಸಿ ತೆಲಂಗಾಣ ಸಿಎಂ ಆದೇಶ ಹೊರಡಿಸಿದ್ದಾರೆ.

ಮೇ 7ರಂದು ಕೊರೋನಾ ಹಿನ್ನೆಲೆಯಲ್ಲಿ ಗುರುತಿಸಲಾಗಿರುವ ಕಂಟೈನ್‌ಮೆಂಟ್‌ ಝೋನ್‌ಗಲ್ಲಿ 14 ದಿನಗಳ ಕಡ್ಡಾಯ ಐಸೋಲೇಷನ್‌ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ತೆಲಂಗಾಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ವಿಶೇಷ ಎಂದರೆ ಪ್ರಧಾನಿ ಲಾಕ್‌ಡೌನ್‌ ವಿಸ್ತರಣೆಗೂ ಮೊದಲು ದೇಶದ ಪ್ರಮುಖ ರಾಜ್ಯಗಳ ಏಪ್ರಿಲ್‌ 30ರವರೆಗೂ ಲಾಕ್‌ಡೌನ್‌ ವಿಸ್ತರಿಸಿ ನಿರ್ಧಾರ ಕೈಗೊಂಡಿದ್ದವು. ಅಲ್ಲದೇ ಪ್ರಧಾನಿ ಮೋದಿ ಜೊತೆಗೆ ನಡೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲೂ ಏಪ್ರಿಲ್‌ 30ರವರೆಗೆ ಲಾಕ್‌ಡೌನ್‌ ವಿಸ್ತರಿಸುವಂತೆ ಮನವಿ ಮಾಡಿದ್ದವು. ಆದರೆ ಪ್ರಧಾನಿ ಮೋದಿ ಏಪ್ರಿಲ್‌ 14ರಂದು ಮಾಡಿದ್ದ ರಾಷ್ಟ್ರೀಯ ಭಾಷಣದಲ್ಲಿ ಮೇ ೩ರವರೆಗೆ ಲಾಕ್‌ಡೌನ್‌ ವಿಸ್ತರಿಸಿ ಘೋಷಣೆ ಮಾಡಿದ್ದರು.

LEAVE A REPLY

Please enter your comment!
Please enter your name here