ಮೇ 30ರವರೆಗೂ ಲಾಕ್‌ಡೌನ್‌ ವಿಸ್ತರಣೆ ಸಾಧ್ಯತೆ

ಮೇ 30ರವರೆಗೂ ಅಂದರೆ ಮತ್ತೆ 13 ದಿನಗಳ ಕಾಲ ದೇಶಾದ್ಯಂತ ಲಾಕ್‌ಡೌನ್‌ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಈ ಸಂಬಂಧ ಇವತ್ತು ಕೇಂದ್ರ ಗೃಹ ಸಚಿವಾಲಯ ಅಧಿಕೃತ ಆದೇಶ ಹೊರಡಿಸಲಿದೆ.

ಲಾಕ್‌ಡೌನ್‌ ಸಂಬಂಧ ಈಗಾಗಲೇ ರಾಜ್ಯಗಳು ತಮ್ಮ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ.

ಒಂದೇ ಸಲಕ್ಕೆ ಲಾಕ್‌ಡೌನ್‌ನಿಂದ ವಿಯಾತಿಯನ್ನು ಕೊಟ್ಟರೆ ಕೊರೋನಾ ಕೇಸ್‌ಗಳ ಸಂಖ್ಯೆ ದಿಢೀರ್‌ ಏರಿಕೆ ಆಗಬಹುದು ಎಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗ್ರೀನ್‌ ಮತ್ತು ಆರೆಂಜ್‌ಝೋನ್‌ ಜಿಲ್ಲೆಗಳಲ್ಲಿ ಇನ್ನಷ್ಟು ವಿನಾಯ್ತಿ ಸಿಗುವ  ಸಾಧ್ಯತೆ ಇದೆ.

ಬೆಂಗಳೂರು ಸೇರಿದಂತೆ ಮಹಾನಗರಿಗಳಲ್ಲಿ ಮೆಟ್ರೋ ರೈಲು ಸೇವೆಗೆ ಅನುಮತಿ ಸಿಗುವ ಸಾಧ್ಯತೆ ಇಲ್ಲ.

ರೆಡ್‌ಝೋನ್‌ಗಳಲ್ಲಿ ಬಸ್‌ಗಳ ಓಡಾಟಕ್ಕೆ ಅವಕಾಶ ಸಿಗುವುದು ಅನುಮಾನ. ಆಟೋ ಮತ್ತು ಊಲಾ-ಓಬರ್‌ನಂತಹ ಆಪ್‌ ಅಧಾರಿತ ವಾಹನಗಳ ಸಂಚಾರಕ್ಕೆ ಅನುಮತಿ ಸಿಗಬಹುದು. ಆದರೆ ಇಬ್ಬರಷ್ಟೇ ಪ್ರಯಾಣಿಕರು ಸಂಚಾರ ಮಾಡಬೇಕು ಎನ್ನುವ ಷರತ್ತು ವಿಧಿಸಬಹುದು.

ಮಾಲ್‌ಗಳನ್ನು ತೆರೆಯಲು ಅನುಮತಿ ನೀಡುವುದು ಅನುಮಾನ. ಕೇವಲ ವಿಶೇಷ ರೈಲು ಮತ್ತು ಶ್ರಮಿಕ್‌ ರೈಲುಗಳನ್ನು ಬಿಟ್ಟರೆ ಉಳಿದಂತೆ ಪ್ಯಾಸೆಂಬರ್‌, ಎಕ್ಸ್‌ಪ್ರೆಸ್‌ ರೈಲುಗಳ ಓಡಾಟವಿರುವುದು ಅನುಮಾನ.

ರಾಜ್ಯಗಳ ಆಕ್ಷೇಪವಿದ್ದರೂ ದೇಶೀಯ ವಿಮಾನಗಳ ಹಾರಾಟಕ್ಕೆ ಅನುಮತಿ ಸಿಗುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here