ದೇಶಾದ್ಯಂತ ಲಾಕ್ ಡೌನ್ ಕೋರ್ಟುಗಳ ವ್ಯಾಜ್ಯಗಳ ಮೇಲೆ ಕೂಡ ಪರಿಣಾಮ ಬೀರಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಕೀಲರು ಕೋರ್ಟಿಗೆ ಖುದ್ದು ಹಾಜರಾಗಿ ಅರ್ಜಿ ದಾಖಲಿಸುವ ಪ್ರಕ್ರಿಯೆಗೆ ಮೇ 13ರಿಂದ ಮರು ಚಾಲನೆಗೆ ತೀರ್ಮಾನಿಸಲಾಗಿದೆ.
ವಕೀಲರು ಖುದ್ದು ಕೋರ್ಟ್ಗೆ ತೆರಳಿ ಅರ್ಜಿ ದಾಖಲಿಸುವ ಪ್ರಕ್ರಿಯೆ ಮಾ.24 ರಂದು ಲಾಕ್ ಡೌನ್ ಘೋಷಣೆಯಾದ ದಿನದಿಂದ ಸ್ಥಗಿತಗೊಂಡಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ವಕೀಲರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರು.
ತುರ್ತು ಅರ್ಜಿಗಳನ್ನು ಇ-ಫೈಲಿಂಗ್ ಮೂಲಕ ದಾಖಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಬೆಂಗಳೂರಿನ ಹೈಕೋರ್ಟ್ ಪೀಠದಲ್ಲಿ ವಕೀಲರು ಖುದ್ದು ಕೋರ್ಟ್ಗೆ ತೆರಳಿ ಅರ್ಜಿ ದಾಖಲಿಸುವುದಕ್ಕೆ ಅನುಮತಿ ನೀಡಲಾಗಿದೆ.
ಲಾಕ್ ಡೌನ್ ಸಡಿಲಿಕೆಯಾದ ಕಾರಣ ಮೇ 13 ರಿಂದ ಈ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲು ಹೈಕೋರ್ಟ್ ತೀರ್ಮಾನ.
ಅದರಂತೆ ಮೇ 13 ಮೇ 14 ಮತ್ತು 15ರಂದು ಬೆಳಗ್ಗೆ 11 ರಿಂದ ವಕೀಲರು, ವಕೀಲರ ಗುಮಾಸ್ತರು ಮತ್ತು ಪಾರ್ಟಿ ಇನ್ ಪರ್ಸನ್ಸ್ ನ್ಯಾಯಾಲಯಕ್ಕೆ ತೆರಳಿ ಅರ್ಜಿ ದಾಖಲಿಸಬಹುದು.