ದೇಶಾದ್ಯಂತ ಲಾಕ್ಡೌನ್ ಮೇ 31ರವರೆಗೆ ಅಂದರೆ ಮತ್ತೆ 14 ದಿನಗಳವರೆಗೆ ವಿಸ್ತರಣೆ ಆಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಸೋಮವಾರದಿಂದ ರಾಷ್ಟ್ರಾದ್ಯಂತ ಜಾರಿ ಆಗಲಿರುವ ಲಾಕ್ಡೌನ್ನ ಬಣ್ಣ ಮತ್ತು ಸ್ವರೂಪ ಸಂಪೂರ್ಣ ಬದಲಾಗಲಿದೆ. ಇವತ್ತು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಕೃತ ಮಾರ್ಗಸೂಚಿಯಲ್ಲಿ ಲಾಕ್ಡೌನ್ನಿಂದ ಬಹುತೇಕ ಎಲ್ಲದ್ದಕ್ಕೂ ರಿಲೀಫ್ ನೀಡಿದೆ.
ನಾಳೆಯಿಂದ ಇಡೀ ದೇಶದಲ್ಲಿ ಏನೆಲ್ಲ ಇರಲ್ಲ ಎನ್ನುವ ಮಾಹಿತಿ ಇಲ್ಲಿದೆ.
1. ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಇರಲ್ಲ
2. ಮೆಟ್ರೋ ರೈಲು ಇರಲ್ಲ
3. ಪ್ಯಾಸೆಂಜರ್, ಎಕ್ಸ್ಪ್ರೆಸ್ ರೈಲುಗಳ ಓಡಾಟ ಇರಲ್ಲ (ಶ್ರಮಿಕ ಮತ್ತು ವಿಶೇಷ ರೈಲುಗಳನ್ನು ಬಿಟ್ಟು ಉಳಿದ ರೈಲುಗಳ ಓಡಾಡಲ್ಲ)
4. ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್ಗಳು ಇರಲ್ಲ
5. ಹೋಟೆಲ್, ರೆಸ್ಟೋರೆಂಟ್ಗಳು ಬಂದ್ ಆಗಿರುತ್ತವೆ
6. ಥಿಯೇಟರ್, ಮಾಲ್, ಜಿಮ್, ಸ್ವಿಮ್ಮಿಂಗ್ಪೂಲ್, ಲಾಡ್ಜ್, ಪಾರ್ಕ್, ಆಡಿಟೋರಿಯಂ ತೆರೆಯಲ್ಲ
7. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಭೆ ಸಮಾರಂಭ ನಡೆಯಲ್ಲ
ಇಡೀ ದೇಶದಲ್ಲಿ ಇದ್ಯಾವುದಕ್ಕೂ ರಾಜ್ಯಗಳೂ ಅನುಮತಿಯನ್ನು ನೀಡುವಂತಿಲ್ಲ. ಅಂದರೆ ಮೇ 31ರವೆರಗೂ ಯಾವುದೇ ಕಾರಣಕ್ಕೂ ಈ ಮೇಲೆ ಹೇಳಿದ ಸಂಸ್ಥೆಗಳು ತೆರೆಯಲ್ಲ.
[…] ಮೇ 31ರವರೆಗೂ ದೇಶಾದ್ಯಂತ ಇವೆಲ್ಲವೂ ಬಂದ್ … […]