ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಅನುಮತಿ ಬೇಕಿಲ್ಲ: ಮಾಜಿ ಸಚಿವ ಎಂ. ಬಿ. ಪಾಟೀಲ್

Lingayata

ವಿಜಯಪುರ: ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಅನುಮತಿ ಬೇಕಿಲ್ಲ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ನಮ್ಮ ರಾಜ್ಯದಲ್ಲಿ ನಡೆಯುವ ಯೋಜನೆ ಆಗಿದ್ದು, ಇದಕ್ಕೆ ತಮಿಳುನಾಡು ಸರಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ.

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗಲಿದ್ದು, ರಾಜ್ಯ ಸರಕಾರ ತಮಿಳುನಾಡಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.

ಕಾನೂನಾತ್ಮಕ, ತಾಂತ್ರಿಕವಾಗಿ ಯೋಜನೆ ಮುಂದುವರೆಸಬೇಕು ಎಂದು ಎಂ. ಬಿ. ಪಾಟೀಲ್ ಆಗ್ರಹಿಸಿದರು.

ಯೋಜನೆ ತಡೆಗೆ ಕೇಂದ್ರ ಸರಕಾರದ ಮೇಲೆ ತಮಿಳುನಾಡು ಒತ್ತಡ ಹಾಕಿದರೆ ಅದು ರಾಜಕೀಯವಾಗುತ್ತದೆ. ನಾವೂ ಕೂಡ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಬೇಕು.

ಈ ಹಿನ್ನೆಲೆಯಲ್ಲಿ ಸರಕಾರ ಕೂಡಲೇ ಮಾಜಿ ಸಿಎಂಗಳು, ಜಲಸಂಪನ್ಮೂಲ ಖಾತೆ ಮಾಜಿ ಸಚಿವರು ಸೇರಿದಂತೆ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂದು ಎಂ. ಬಿ. ಪಾಟೀಲ್ ಹೇಳಿದರು.

LEAVE A REPLY

Please enter your comment!
Please enter your name here