ಮೆಗಾ ಕಾಂಬಿನೇಷನ್.. ಚಿರಂಜೀವಿ ಜೊತೆ ಮಹೇಶ್ ಬಾಬು..! ಅಭಿಮಾನಿಗಳಿಗೆ ಹಬ್ಬ

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಮೆಗಾ ಆಫರ್ ಒಂದು ಬಂದಿದೆ. ಅದು ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾ ಆಚಾರ್ಯದಲ್ಲಿ ನಟಿಸುವ ಅವಕಾಶ..

ಮೆಗಾ ಸ್ಟಾರ್ ಚಿರಂಜೀವಿ ನಟನೆಯ 152ನೇ ಸಿನಿಮಾಗೆ ನಿರ್ದೇಶಕ ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದು, ರಾಮ್‍ಚರಣ್ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾದಲ್ಲಿ ರಾಮ್‍ಚರಣ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಾಮ್ ಚರಣ್ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ ಅವರ ಸ್ಥಾನದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹಬ್ಬಿದೆ.

ಒಂದು ವೇಳೆ ಮಹೇಶ್ ಬಾಬು ಈ ಸಿನಿಮಾಗೆ ಒಪ್ಪಿಗೆ ಕೊಟ್ಟಲ್ಲಿ, ಚಿರು-ಕೊರಟಾಲ ಸಿನಿಮಾದಲ್ಲಿ ಸುಮಾರು 30 ನಿಮಿಷಗಳ ಕಾಲ ಸ್ಟುಡೆಂಟ್ ಲೀಡರ್ ಆಗಿ ಅಭಿಮಾನಿಗಳಿಗೆ ಮುದ ನೀಡಲಿದ್ದಾರೆ. ಮೇ ಹೊತ್ತಿಗೆ ಮಹೇಶ್ ಬಾಬು ಸೆಟ್‍ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿ ಅಂತಾ ಮೆಗಾ-ಸೂಪರ್ ಸ್ಟಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here