ಮೃಗಾಲಯಕ್ಕೆ ಸುಧಾಮೂರ್ತಿ 20 ಲಕ್ಷ ರೂಪಾಯಿ ದೇಣಿಗೆ

ಮೈಸೂರು ಮೃಗಾಲಯಕ್ಕಾಗಿ ಸುಧಾಮೂರ್ತಿ 20 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಮೃಗಾಯಲಕ್ಕೆ ದೇಣಿಗೆ ನೀಡುವಂತೆ ಮೈಸೂರು ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಸುಧಾಮೂರ್ತಿಯವರಿಗೆ ಮನವಿ ಮಾಡಿಕೊಂಡಿದ್ದರು.

ಸಚಿವರು ಮಾಡಿದ್ದ ಮನವಿಗೆ ಸುಧಾಮೂರ್ತಿ ಸ್ಪಂದಿಸಿದ್ದಾರೆ.

ಮೃಗಾಲಯಕ್ಕೆ ದೇಣಿಗೆ ನೀಡುವಂತೆ ಅನಿವಾಸಿ ಭಾರತೀಯರು ಹಾಗೂ ಅಕ್ಕ ಸಂಸ್ಥೆಗೂ ಕೇಳಿಕೊಂಡಿದ್ದು ಅವರಿಂದಲೂ ಕೊಡುಗೆ ಸಿಗುವ ನಿರೀಕ್ಷೆ ಇದೆ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here