ಮೂಡಬಿದಿರೆಯ ಕೊರೊನಾ ವಾರಿಯರ್ಸ್ ಈ ಯುವಕರು…

ಕೊರೊನಾ ವೈರಸ್‌ ವಿನಾಶಕ್ಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲ ಸೋಡಿಯಂ ಹೈಪೋಕ್ಲೋರೈಟ್‌ ರಾಸಾಯನಿಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ನಗರ ವ್ಯಾಪ್ತಿಯಲ್ಲಿ ತ್ರಿಭುವನ್ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬೆದ್ರ ಆಡ್ವಂಚರ್ ಕ್ಲಬ್ ಸ್ಥಳೀಯ ಪುರಸಭೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಿಂಪಡಣೆ ಮಾಡಲಾಗುತ್ತಿದೆ.

ಕೊರೋನಾ ರೋಗ ತಡೆಗಟ್ಟೋದಕ್ಕೆ ಏನೆಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಅನ್ನೋದನ್ನು ನೋಡುವುದಾದರೆ, ದೇಶದಲ್ಲಿ ಮೇಲ್ನೋಟಕ್ಕೆ ಚೆಕ್‌ ಪೋಸ್ಟ್‌, ಪ್ರಮುಖ ಕಚೇರಿಗಳಲ್ಲಿ ಆರೋಗ್ಯ ತಪಾಸಣೆ, ಆಶಾ ಕಾರ್ಯಕರ್ತರಿಂದ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಮಾಹಿತಿ ಸಂಗ್ರಹ, ʼಆರೋಗ್ಯ ಸೇತುʼ ಹಾಗೂ ಇನ್ನಿತರ ಸಹಾಯವಾಣಿಗಳು ಹಾಗೂ ನಗರದ ಬೀದಿಗಳ ತುಂಬಾ ಸ್ಯಾನಿಟೈಸರ್‌ ಮಾಡುವುದನ್ನು ಕಾಣುತ್ತಿದ್ದೇವೆ. ಪ್ರಮುಖವಾಗಿ ಇವುಗಳೆಲ್ಲದರ ವಿಚಾರದಲ್ಲಿ ಹೆಚ್ಚಾಗಿ ಕಾಣುವುದು ನಗರ ಪ್ರದೇಶಗಳಲ್ಲಿ ಸಿಂಪಡಿಸುವ ಸೋಡಿಯಂ ಹೈಪೋಕ್ಲೋರೈಟ್‌ ರಾಸಾಯನಿಕ ಕೂಡಾ ಒಂದು.

ಮೂಡಬಿದಿರೆ ನಗರದಾದ್ಯಂತ ಅಂಗಡಿಗಳ ಮುಂಭಾಗಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಿರುವ ತಂಡ

ಸಾಮಾಜಿಕ ಕಳಕಳಿಯ ಈ ತಂಡ ಇದೀಗ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಬೀದಿಗಿಳಿದು ಕೆಲಸ ಮಾಡುತ್ತಿದೆ. ಈಗಾಗಲೇ ಬರೋಬ್ಬರಿ 12 ಸುತ್ತಿನ ಔಷಧಿ ಸಿಂಪಡಣೆಯ ಕಾರ್ಯವನ್ನು ಈ ತಂಡದ ಸದಸ್ಯರು ಉತ್ಸುಕತೆಯಿಂದ ಮಾಡಿದ್ದಾರೆ. ಇದರಿಂದ ಒಂದು ಹಂತದಲ್ಲಿ ನೈರ್ಮಲ್ಯವನ್ನು ಕಾಪಾಡಿ ನಗರದಾದ್ಯಂತ ವೈರಸ್‌ ವ್ಯಾಪಕತೆ ತಡೆಯಲು ಅನುಕೂಲವಾಗುವಂತೆ ಮಾಡಿದೆ.

ಮೂಡುಬಿದಿರೆಯ ಅಂಗಡಿ, ಬ್ಯಾಂಕ್,ಎಟಿಎಂ,ಆಟೊ ಸ್ಟ್ಯಾಂಡ್, ಮಾರ್ಕೆಟ್‌ ಹೀಗೆ ಹಲವು ಸ್ಥಳಗಳಲ್ಲಿ ಜನ ಸಂಚಾರವಿರುವ ಪ್ರದೇಶಗಳಲ್ಲಿ ಈ ರಾಸಾಯನಿಕ ಸಿಂಪಡಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಲಾಕ್‌ ಡೌನ್ ನ ಇಂದಿನ ಸ್ಥಿತಿಯಲ್ಲಿ ನಿಜಾರ್ಥದಲ್ಲಿ ಹೀಗೆ ಸೇವೆಯ ಕಾರ್ಯದಲ್ಲಿ ಆಳ್ವಾಸ್‌ ಸಂಸ್ಥೆಯ ಡಾ.ವಿನಯ್‌ ಆಳ್ವ, ಡಾ.ರೋಷನ್‌ ಅತಿಕಾರಿ, ಧೀರಜ್‌ ಕುಮಾರ್‌ ಕೊಲ್ಕೆ, ಅಕ್ಷಯ್‌ ಕೆ.ಜೈನ್‌, ಮನೋಹರ್‌ ಬಿ.ಎಲ್‌, ಗುರು ಅಂಚನ್‌, ಗುರು,ಚೇತು, ದೀಪಕ್‌ ಕೊಲ್ಕೆ, ನಿಶ್ಚಲ್‌ ಜೈನ್‌, ರಫೀಕ್‌, ಜೀವೋತ್ತಮ ಪ್ರಭು, ರಾಕೇಶ್‌ ಪ್ರಭು, ಸ್ಕಂದ ಜಿ.ಎನ್.ಭಟ್‌, ರೀತೇಶ್‌ ಅತಿಕಾರಿ, ಮೊಹಮ್ಮದ್‌ ಆರಿಷ್‌ ಮುಂತಾದವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸದ್ದಿಲ್ಲದಂತೆ ಮಾನವೀಯ ಕಾರ್ಯ ಮಾಡುತ್ತಿದ್ದು ಇವರ ಕಾರ್ಯ ಶ್ಲಾಘನೀಯವಾಗಿದೆ.

LEAVE A REPLY

Please enter your comment!
Please enter your name here