ಮುಚ್ಚಿ ಹೋಗುತ್ತಿರುವ ಉದ್ಯಮಗಳಿಗೆ ನಗದು ನೆರವು ನೀಡದೇ ಇರುವುದು ಕ್ರಿಮಿನಲ್‌ ಅಪರಾಧ – ಮೋದಿ ವಿರುದ್ಧ ರಾಹುಲ್‌ ಕಿಡಿ

ಲಾಕ್‌ಡೌನ್‌ನಿಂದಾಗಿ ಮುಚ್ಚುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಗದು ನೆರವು ನೀಡದೇ ಇರುವುದು ಕೇಂದ್ರ ಸರ್ಕಾರ ಎಸಗುತ್ತಿರುವ ಕ್ರಿಮಿನಲ್‌ ಅಪರಾಧ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

11 ಕೋಟಿ ಭಾರತೀಯರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೆಲಸ ಮಾಡುತ್ತಿದ್ದಾರೆ. ಇವುಗಳ ಪೈಕಿ ಮೂರನೇ ಒಂದು ಭಾಗದಷ್ಟು ಎಂಎಸ್‌ಎಂಇಗಳು ಮುಚ್ಚಿ ಹೋಗುತ್ತಿವೆ. ಅವರಿಗೆ ತಕ್ಷಣವೇ ನಗದು ಸಹಾಯ ನೀಡದೇ ಇರೋದು ಭಾರತದ ಸರ್ಕಾರ ಎಸಗುತ್ತಿರುವ ಕ್ರಿಮಿನಲ್‌ ಅಪರಾಧ ಎಂದು ರಾಹುಲ್‌ ಟ್ವೀಟಿಸಿದ್ದಾರೆ.

ಶೇಕಡಾ ೩೨ರಷ್ಟು ಸಣ್ಣ ಮತ್ತು ಮಧ್ಯ ಕೈಗಾರಿಕೆಗಳು, ಶೇಕಡಾ ೩೭ರಷ್ಟು ಸ್ವಯಂ ಉದ್ಯೋಗದ ಉದ್ದಿಮೆಗಳು ಲಾಕ್‌ಡೌನ್‌ನಿಂದಾಗಿ ಮುಚ್ಚಿ ಹೋಗಲಿದೆ ಎಂದು ಅಖಿಲ ಭಾರತ ಉತ್ಪಾದಕರ ಸಂಘ ನಡೆಸಿದ ಸರ್ವೆಯಲ್ಲಿ ಬಹಿರಂಗವಾಗಿತ್ತು. ಈ ವರದಿನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here