ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿ ಬಂಡಾಯ ಸ್ಫೋಟ- ಸಿಎಂ ಸ್ಥಾನದಿಂದ ಕೆಳಗಿಳಿಸಲು ತಂತ್ರ

ಕೋರೋನ ಮತ್ತು ಲಾಕ್ಡೌನ್ ಹೊತ್ತಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯಲ್ಲಿ ತಂತ್ರಗಾರಿಕೆ ತೀವ್ರಗೊಂಡಿದೆ.

ಬಿಜೆಪಿಯ ಸುಮಾರು 15 ಕ್ಕೂ ಹೆಚ್ಚು ಅಸಮಾಧಾನಿತ ಶಾಸಕರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಸಭೆಯಲ್ಲಿ ಸಚಿವ ಸ್ಥಾನ ಕೈತಪ್ಪಿರುವ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಅಪ್ಪುಗೌಡ ,ರಾಜುಗೌಡ ಸೇರಿದಂತೆ ಹಲವು ಶಾಸಕರು ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಕೆಲವೇ ದಿನಗಳಲ್ಲಿ ವಿಧಾನಪರಿಷತ್ ಮತ್ತು ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು ಈ ಹೊತ್ತಲ್ಲೇ ಬಂಡಾಯ ರಾಜಕೀಯ ಭುಗಿಲೆದ್ದಿದೆ.

LEAVE A REPLY

Please enter your comment!
Please enter your name here