ಮುಖದ ಮೇಲಿನ ಬೇಡವಾದ ಕೂದಲಿನ ಬಗ್ಗೆ ಚಿಂತೆಯೇ? ಇಲ್ಲಿವೆ 3 ಸಿಂಪಲ್ ಟಿಪ್ಸ್

ಮುಖ ಎಷ್ಟೇ ಸುಂದರವಾಗಿದ್ದರೂ ಕೂದಲು ಬೆಳೆದಿದ್ದರೆ ಅದು ವಿರೂಪವಾಗಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ತಲೆನೋವು ಉಂಟುಮಾಡುತ್ತದೆ. ಇದನ್ನು ಪೂರ್ತಿಯಾಗಿ ನಿವಾರಣೆ ಮಾಡಲು ಇಲ್ಲಿವೆ ೩ ಸಿಂಪಲ್‌ ಟಿಪ್ಸ್.‌

ಮನೆಯಲ್ಲೇ ವ್ಯಾಕ್ಸ್‌ ಮಾಡಿಕೊಳ್ಳಿ:  ನಿಂಬೆ ಹಣ್ಣಿನ ರಸ ಮತ್ತು ಸಕ್ಕರೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ ಕೋಲ್ಡ್‌ ವ್ಯಾಕ್ಸ್‌ ತಯಾರಿಸಿಕೊಳ್ಳಿ. ಮುಖದಲ್ಲಿ ಯಾವ ಭಾಗದಲ್ಲಿ ಕೂದಲು ಬೆಳೆದಿದೆಯೋ ಆ ಭಾಗಕ್ಕೆ ಹಚ್ಚಿ ಮತ್ತು ಕೂದಲನ್ನು ತೆಗೆಯಲು ಬಟ್ಟೆಯನ್ನು ಬಳಸಿ.

ಅರಿಶಿನ ಮತ್ತು ಹಾಲಿನ ಪೇಸ್ಟ್‌ :ಸ್ವಲ್ಪ ಹಾಲು ಮತ್ತು 1 ಚಿಟಿಕೆ ಅರಿಶಿನವನ್ನು ಒಂದು ಬೌಲ್‌ ನಲ್ಲಿ ತೆಗೆದುಕೊಂಡು ಚೆನ್ನಾಗಿ ಪೇಸ್ಟ್‌ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ವಿಶೇಷವಾಗಿ ನಿಮ್ಮ ತುಟಿಯ ಮೇಲ್ಭಾಗಕ್ಕೆ ಹಚ್ಚಲು ಮರೆಯದಿರಿ. ಒಣಗಿದ ನಂತರ ಆ ಭಾಗವನ್ನು ನಿಧಾನವಾಗಿ ನಿಮ್ಮ ಕೈಬೆರಳಿನಿಂದ ಉಜ್ಜಿಕೊಳ್ಳಿ. ತಣ್ಣಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ಪ್ರತೀ ದಿನ ಮಾಡಿಕೊಳ್ಳುವುದರಿಂದ ನಿಮ್ಮ ಮುಖದ ಕೂದಲಿನ ಸಮಸ್ಯೆಯಿಂದ ನೀವು ಹೊರಬರಬಹುದು.

ಮೊಸರು ಮತ್ತು ಕಡ್ಲೆಹಿಟ್ಟಿನ ಮಿಶ್ರಣ :ಒಂದು ಸಣ್ಣ ಬೌಲ್‌ ಗೆ ಸ್ವಲ್ಪ ಮೊಸರು, 1 ಚಿಟಿಕೆ ಅರಿಶಿನ ಮತ್ತು ಮತ್ತು ಸ್ವಲ್ಪ ಕಡಲೆಹಿಟ್ಟು ತೆಗೆದುಕೊಂಡು ಮಿಶ್ರಣ ತಯಾರಿಸಿ.(ಅತಿಯಾಗಿ ಅರಿಶಿನವನ್ನು ಸೇರಿಸಬೇಡಿ) ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಒಣಗಲು ಬಿಡಿ, ನಂತರ ನಿಧಾನವಾಗಿ ಆ ಭಾಗವನ್ನು ನಿಧಾನವಾಗಿ ನಿಮ್ಮ ಕೈಬೆರಳಿನಿಂದ ಉಜ್ಜಿಕೊಳ್ಳಿ. ತಣ್ಣಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ.

ವಾರದಲ್ಲಿ ಒಮ್ಮೆ ಈ ಕ್ರಮವನ್ನು ಅನುಸರಿಸಿ, ಉತ್ತಮ ಫಲಿತಾಂಶವನ್ನು ಪಡೆಯಿರಿ.

LEAVE A REPLY

Please enter your comment!
Please enter your name here