ಮುಂದಿನ ತಿಂಗಳೇ ಮದ್ವೆಯಾಗ್ತಿದ್ದಾರೆ ಬಿಗ್​ಬಾಸ್ ನ ಈ ಜೋಡಿ!

ಬಿಗ್​ಬಾಸ್​ ರಿಯಾಲಿಟಿ ಶೋಗೆ ಸ್ಪರ್ಧಿಗಳಾಗಿ ಹೋಗಿ, ಸ್ನೇಹಿತರಾಗಿ ಹೊರಬಂದಿದ್ದ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸ್ಪರ್ಧೆ ಮುಗಿದು ಹೊರಬಂದ ಮೇಲೆ ಬಹಳ ಆತ್ಮೀಯರಾಗಿದ್ದರು. ಅವರಿಬ್ಬರು ಜೋಡಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.

  ಕಳೆದ ಬಾರಿಯ ದಸರಾ ಹಬ್ಬದ ವೇಳೆ ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ನಿವೇದಿತಾಗೆ ಪ್ರೇಮ ನಿವೇದನೆ ಮಾಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು.

ಸರ್ಕಾರಿ ಪ್ರಾಯೋಜಿತ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿದ್ದು ಭಾರೀ ಸುದ್ದಿಯಾಗಿ ವ್ಯಾಪಕ ಟೀಕೆಗೆ ಸಹ ಗುರಿಯಾಗಿದ್ದರು. ನಂತರ ಚಂದನ್​ ಕ್ಷಮೆ ಕೇಳುವ ಮೂಲಕ ವಿವಾದ ತಣ್ಣಗಾಗಿತ್ತು.

  ನಂತರ ಈ ಜೋಡಿ ಅಕ್ಟೋಬರ್ ತಿಂಗಳಲ್ಲಿ ಮೈಸೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದೀಗ ಮದುವೆ ದಿನಾಂಕವನ್ನು ಘೋಷಿಸಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕುಟುಂಬದವರು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಮದುವೆಗೆ ಸಿದ್ಧತೆಗಳು ಶುರುವಾಗಿದ್ದು,ಮುಂದಿನ ತಿಂಗಳು ಫೆಬ್ರವರಿ  25-26 ರಂದು ಅದ್ದೂರಿಯಾಗಿ ಮೈಸೂರಿನ ಸ್ಪೆಕ್ಟ್ರಾ ಹಾಲ್ ನಲ್ಲಿ ಮದುವೆ ನಡೆಯಲಿದೆ.

LEAVE A REPLY

Please enter your comment!
Please enter your name here