ಮಿಕ್ಕಿದ ದೋಸೆ ಹಿಟ್ಟಿನಿಂದ ಇಷ್ಟೆಲ್ಲಾ ಮಾಡ್ಬಹುದಾ..!

ಸತ್ಯಸಾಕ್ಷಿ ತುಮರಿ-

ದೋಸೆ ಮಾಡಲು ರುಬ್ಬಿದ ಹಿಟ್ಟು ಉಳಿದು ಬಿಡುತ್ತದೆ. ಉಳಿದ ಹಿಟ್ಟನ್ನು ಚೆಲ್ಲುವ ಬದಲು ಅದನ್ನು ಮತ್ತೆ ಉಪಯೋಗಿಸಿಕೊಳ್ಳಬಹುದು. ಬೆಳಗ್ಗೆ ಮಾಡಿದ ದೋಸೆ ಹಿಟ್ಟು ಉಳಿದರೆ ಅದಕ್ಕೆ ಸ್ವಲ್ಪ ಜೋಳದ ಹಿಟ್ಟು ಮಿಶ್ರ ಮಾಡಿ ರುಚಿಯಾದ ದೋಸೆ ಮಾಡಬಹುದು. ಇಲ್ಲವಾದರೆ ದೋಸೆ ಹಿಟ್ಟಿನಿಂದ ರುಚಿಯಾದ ತಿಂಡಿಯೊಂದನ್ನು ಮಾಡಬಹುದು. ಹೇಗೆ ಎಂಬುದನ್ನು ನಾವು ಹೇಳ್ತೇವೆ ನೋಡಿ.
ಬೇಕಾಗುವ ಸಾಮಗ್ರಿಗಳು
ಉಳಿದ ದೋಸೆ ಹಿಟ್ಟು
ಸ್ವಲ್ಪ ಕಡಲೆ ಹಿಟ್ಟು
ಸ್ವಲ್ಪ ಅಕ್ಕಿ ಹಿಟ್ಟು
ಈರುಳ್ಳಿ,
ಅಚ್ಚಕಾರದ ಪುಡಿ ಖಾರಕ್ಕೆ ತಕ್ಕಷ್ಟು
ಓಮಿನ ಕಾಳು
ರುಚಿಗೆ ತಕ್ಕಷ್ಟು ಉಪ್ಪು
ಮೊದಲಿಗೆ ದೋಸೆ ಹಿಟ್ಟಿಗೆ ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟು ಮಿಶ್ರ ಮಾಡಿ ಗಂಟುಗಳಿಲ್ಲದಂತೆ ಕಲಸಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ನಂತರ ಅದಕ್ಕೆ ಅಚ್ಚಕಾರದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿಯಿರಿ. ಇದು ಸಂಜೆಯ ವೇಳೆಗೆ ಚಹಾದ ಜೊತೆ ಸವಿಯಲು ತುಂಬಾ ರುಚಿಯಾಗಿಯೂ ಇರುತ್ತದೆ.

LEAVE A REPLY

Please enter your comment!
Please enter your name here