ಮಾಲ್‌, ರೆಸ್ಟೋರೆಂಟ್‌-ಹೋಟೆಲ್‌ ತೆರೆಯಲು ಹೊಸ ಮಾರ್ಗಸೂಚಿ ಬಿಡುಗಡೆ

ಜೂನ್‌ 8ರಿಂದ ಶಾಪಿಂಗ್‌ ಮಾಲ್‌ ಮತ್ತು ರೆಸ್ಟೋರೆಂಟ್‌, ಹೋಟೆಲ್‌ಗಳನ್ನು ತೆರೆಯಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ್ದು, ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಯನ್ನು ಇವತ್ತು ಬಿಡುಗಡೆ ಮಾಡಿದೆ.

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು:

1) ಶೇಕಡಾ 50 ಕ್ಕಿಂತ ಹೆಚ್ಚು ಮಂದಿ ಗ್ರಾಹಕರು ರೆಸ್ಟೋರೆಂಟ್‌ಗಳಲ್ಲಿ ಕೂರುವಂತಿಲ್ಲ

2) ಬಟ್ಟೆಯಿಂದ ಮಾಡಿರುವ ಟವಲ್‌ ಬದಲು ಬಳಸಿ ಎಸೆಯಬಹುದಾದ ಟವಲ್‌ಗಳನ್ನು ಮಾತ್ರ ಬಳಸಬೇಕು

ಮಾಲ್‌ಗಳು:

1) ಮಾಲ್‌ಗಳಲ್ಲಿ ಎಸಿ ಉಷ್ಣಾಂಶ 24 ರಿಂದ 34 ಡಿಗ್ರಿ ಸೆಲ್ಸಿಯಸ್‌ ಅಂತರದಲ್ಲೇ ಇರಬೇಕು

2) ಮಾಲ್‌ಗಳಲ್ಲಿನ ಸಿನಿಮಾ ಥಿಯೇಟರ್‌ ತೆರೆಯುವಂತಿಲ್ಲ

3) ಮಾಲ್‌ಗಳಲ್ಲಿ ಗೇಮಿಂಗ್‌ ಮತ್ತು ಮಕ್ಕಳು ಆಡುವ ಪ್ರದೇಶಗಳು ಬಂದ್‌

4) ಮಾಲ್‌ಗಳಲ್ಲಿ ರೆಸ್ಟೋರೆಂಟ್‌ ಮತ್ತು ಫುಡ್‌ ಕೋರ್ಟ್‌ಗಳನ್ನು ತೆರೆಯಬಬಹುದು. ಆದರೆ ಶೇಕಡಾ ೫೦ಕ್ಕಿಂತ ಹೆಚ್ಚು ಮಂದಿ ಕೂತು ತಿಂಡಿ-ತಿನಿಸು ಸೇವಿಸುವಂತಿಲ್ಲ.

ಸಾಮಾಜಿಕ ಅಂತರ, ಮಾಸ್ಕ್‌ ಕಡ್ಡಾಯದ ಜೊತೆಗೆ 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು ಸಾಧ್ಯವಾದಷ್ಟು ಹೋಟೆಲ್‌, ಮಾಲ್‌, ರೆಸ್ಟೋರೆಂಟ್‌ನಿಂದ ದೂರ ಇರುವುದು ಒಳ್ಳೆದು. ನಿರಂತರವಾಗಿ ಸ್ಯಾನಿಟೈಜೇಷನ್‌ ಮಾಡುವುದು ಕಡ್ಡಾಯ.

LEAVE A REPLY

Please enter your comment!
Please enter your name here