ಮಾನವನ ಮೂತ್ರ ಚಂದಿರನ ಅಂಗಳದಲ್ಲಿ ಕಾಂಕ್ರಿಟ್‌ಗೆ ಬಳಕೆ – ಯುರೋಪಿಯನ್‌ ವಿಜ್ಞಾನಿಗಳ ಅನ್ವೇಷಣೆ

ಮಾನವನ ಸಾಹಸ ಗಗನದಾಚೆಗೆ ಸಾಗಿದೆ. ಮಂಗಳ, ಚಂದಿರ ಹೀಗೆ ಭೂಮಿಯನ್ನು ಬಿಟ್ಟು ಉಳಿದೆಲ್ಲಿ ಅಡಿ ಇಡಬಹುದು, ಭೂಮಿಯಂತೆ ಮತ್ತೊಂದು ಶಾಶ್ವತ ಆವಾಸಸ್ಥಾನಕ್ಕಾಗಿ ಮಾನವ ಹುಡುಕುತ್ತಲೇ ಇದ್ದಾನೆ. ಅದರಲ್ಲೂ ಭೂಮಿಯ ಉಪಗ್ರಹವಾಗಿರುವ ಚಂದಿರನ ಅಂಗಳ ನಭೋ ವಿಜ್ಞಾನಿಗಳ ಕುತೂಹಲವನ್ನೂ ಕಾಲಕಾಲಕ್ಕೂ ವರ್ಧಿಸುತ್ತಲೇ ಇದೆ.

ಹೀಗೆ ಅನ್ವೇಷಣೆಗಳ ಹಿಂದೆ ಬಿದ್ದಿರುವ ವಿಜ್ಞಾನಿಗಳು ಈಗ ಹೊಸ ವಿಷಯವೊಂದರ ಅಧ್ಯಯನ ನಡೆಸುತ್ತಿದ್ದಾರೆ. ಅವರ ಲೆಕ್ಕಾಚಾರ ಪ್ರಕಾರ ಮಾನವನ ಮೂತ್ರವನ್ನು ನೀರಿನ ಬದಲಿಗೆ ಮಂಗಳನ ಅಂಗಳದಲ್ಲಿ ಕಾಂಕ್ರಿಟ್‌ ಕಲಸಲು ಬಳಸಬಹುದಂತೆ. ಅಂದಹಾಗೆ ಇದನ್ನು ಹೇಳಿರುವುದು ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು.

ಮೂತ್ರದಲ್ಲಿರುವ ಯೂರಿಯಾ ಅಂಶ ಚಂದಿರ ಅಂಗಳಲ್ಲಿ ಕಾಂಕ್ರಿಟ್‌ಗೆ ಸಹಕಾರಿ ಆಗಬಹುದು ಎನ್ನುವ ಅಭಿಪ್ರಾಯ ವಿಜ್ಞಾನಿಗಳದ್ದು.

ಚಂದಿರನಲ್ಲಿ ನಿರ್ಮಾಣಕ್ಕಾಗಿ ಭೂಮಿಯಿಂದ ತೆಗೆದುಕೊಂಡು ಹೋಗಬೇಕಾಗಿರುವ ವಸ್ತುಗಳ ಭಾರವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಜಿಯೋ ಪಾಲಿಮಾರ್‌ಗಾಗಿ ಅಗತ್ಯವಾದ ಎಲ್ಲ ಉತ್ಪನ್ನಗಳನ್ನು ಚಂದಿರನ ಅಂಗಳದಲ್ಲೇ ಸಂಗ್ರಹಿಸಬಹುದಾಗಿದೆ. ನೀರಿನ ಬಳಕೆಯನ್ನು ಕಡಿಮೆ ಮಾಡಲು ಸಹಸಮೀಕರಣ ರಾಸಾಯನಿಕವನ್ನು ಚಂದ್ರನಲ್ಲೇ ಪಡೆಯಬಹುದಾಗಿದೆ. ಯೂರಿಯಾ ಜಲಜನಕದ ಬಂಧುತ್ವನ್ನು ವಿಭಜಿಸುವ  ಮೂಲಕ ಹಲವು ನೀರಿನಾಂಶವುಳ್ಳ ಸಮೀಕರಣಗಳ ಗಡುತ್ವವನ್ನು ಕಡಿಮೆ ಮಾಡಬಲ್ಲದು. ನೀರು ಬಿಟ್ಟರೆ ಮೂತ್ರದಲ್ಲಿ ಯೂರಿಯಾದ ಅಂಶ ಅತೀ ಹೆಚ್ಚಿರುವ ಕಾರಣ ಮಾನವರು ಎಲ್ಲೆಲ್ಲಿ ಇದ್ದಾರೋ ಅಲ್ಲೆಲ್ಲ ಅದು ಬಳಕೆಗೆ ಸದಾ ಲಭ್ಯವಿರುತ್ತದೆ.

ಹೀಗಾಗಿ ನಾವು ಚಂದಿರನಲ್ಲಿ ಜಿಯೋ ಪಾಲಿಮರ್‌ಗಳಿಗಾಗಿ ಯೂರಿಯಾವನ್ನು ಸಹ ಸಮೀಕರಣ ರಾಸಾಯನಿಕವಾಗಿ ಬಳಸುವತ್ತ ಅನ್ವೇಷಣೆ ಮಾಡುತ್ತಿದ್ದೇವೆ.

ಎನ್ನುವುದು ಯುರೋಪಿಯನ್‌ ಬಾಹ್ಯಾಕಾಶ ವಿಜ್ಞಾನಿಗಳ ಸಂಶೋಧನಾ ಅಭಿಪ್ರಾಯ.

ಮಾನವ ದಿನದಲ್ಲಿ ಒಂದೂವರೆ ಲೀಟರ್‌ನಷ್ಟು ಮೂತ್ರ ವಿರ್ಸಜನೆ ಮಾಡುತ್ತಾನೆ.ಬಾಹ್ಯಾಕಾಶ ವಿಜ್ಞಾನಿಗಳ ಮೂತ್ರವನ್ನೂ ಭವಿಷ್ಯದಲ್ಲಿ ಚಂದಿರನ ಅಂಗಳದಲ್ಲಿ ಬಳಸಬಹುದು ಎನ್ನುವುದು ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆಯ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here