ಮಾಜಿ ಸಚಿವ ಎಂಸಿ‌ ಮನಗೂಳಿ ಇನ್ನಿಲ್ಲ – ಕೋವಿಡ್ ಹೆಮ್ಮಾರಿಗೆ ಬಲಿ

ಜೆಡಿಎಸ್ ಪಕ್ಷದ ನಿಷ್ಠಾವಂತ, ಹಿರಿಯ ಶಾಸಕ ಸಿಂಧಗಿ ಕ್ಷೇತ್ರದ ಎಂಸಿ‌ ಮನಗೂಳಿ ಇನ್ನಿಲ್ಲ. ಕೋವಿಡ್ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ, ಚಿಕಿತ್ಸೆ ಫಲಕಾರಿಯಾಗದೇ ಇಂದು ನಸುಕಿನ ಜಾವ ಇಹಲೋಕ ತ್ಯಜಿಸಿದ್ದಾರೆ.

ಕೋವಿಡ್ ಸೋಂಕು ತಗುಲಿ ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ಜನವರಿ 9ರಂದು ಕಲಬುರಗಿಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿತ್ತು. ಕಳೆದ 15 ದಿನಗಳಿಂದ ಉಸಿರಾಟ ಸಮಸ್ಯೆ ಉಲ್ಬಣಗೊಂಡಿತ್ತು.

85ವರ್ಷದ ಎಂ ಸಿ ಮನಗೂಳಿ ಅವರು ಸಿಂಧಗಿ ಕ್ಷೇತ್ರದಿಂದ ಎರಡು ಬಾರಿ ಆಯ್ಕೆ ಆಗಿದ್ದರು. ಪಕ್ಷ ನಿಷ್ಠೆಯ ಕಾರಣಕ್ಕೆ ಅವರಿಗೆ ಎರಡು ಬಾರಿಯೂ ಸಚಿವ ಸ್ಥಾನ ಅರಸಿ ಬಂದಿತ್ತು.

ಮನಗುಳಿ ನಿಧನಕ್ಕೆ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಸದ್ಯ ಎಂಸಿ ಮನಗೂಳಿ ಪಾರ್ಥಿವ ಶರೀರವನ್ನು ಸಿಂಧಗಿಗೆ ರಸ್ತೆ ಮಾರ್ಗವಾಗಿ ತೆಗೆದುಕೊಂಡು ಹೋಗಲಾಗುತ್ತಿದ್ದು, ಸಂಜೆ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ.

LEAVE A REPLY

Please enter your comment!
Please enter your name here