ಸುರಪುರದ ” ಬೆಂಕಿ ದೊರೆ” ಖ್ಯಾತಿಯ ಮಾಜಿ ಸಂಸದ ರಂಗಪ್ಪ ನಾಯಕ ನಿಧನ

ರಾಯಚೂರು ಕ್ಷೇತ್ರದ ಮಾಜಿ ಸಂಸದ, ಕಾಂಗ್ರೆಸ್ ನಾಯಕ ರಾಜಾ ರಂಗಪ್ಪ ನಾಯಕ ವಿಧಿವಶರಾಗಿದ್ದಾರೆ. 61 ವರ್ಷದ ರಾಜಾ ರಂಗಪ್ಪ ನಾಯಕ ಅನಾರೋಗ್ಯದಿಂದ ಬಳಲುತ್ತಿದ್ದರು.

ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಯಾದಗಿರಿ ಜಿಲ್ಲೆಯ ಸುರಪುರದ ವಸಂತಮಹಲ್‌ನಲ್ಲಿ ಭಾನುವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.

ರಾಜಕೀಯ ಹಿನ್ನಲೆಯ ಕುಟುಂಬದಿಂದ ಬಂದಂತಹ ಇವರು 1996ರಲ್ಲಿ ಜೆಡಿಎಸ್ ಪಕ್ಷದಿಂದ ರಾಯಚೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಬಳಿಕ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.

ಸುರಪುರದ “ಬೆಂಕಿ ದೊರೆ” ಎಂದೇ ಖ್ಯಾತರಾಗಿದ್ದ ಇವರ ತಂದೆ ರಾಜಾ ಕುಮಾರ ನಾಯಕ 3 ಬಾರಿ ಸುರಪುರದ ಶಾಸಕರಾಗಿದ್ದರು.

ಇವರ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here