ಮಾಜಿ ಭೂಗತ ಪಾತಕಿ ನಿಧನ- ವಿದೇಶದಲ್ಲಿರುವ ಮಗ

ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಇನ್ನಿಲ್ಲ. ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಗಂಭೀರವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನ ಜಾವ 2 ಗಂಟೆಗೆ (ಮೇ.15 ರಂದು) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.‌ ಇವರ ಕಿರಿಯ ಪುತ್ರ ರಾಕಿ ರೈ ಕೆನಡಾದಲ್ಲಿ ನೆಲೆಸಿದ್ದು, ವಿಮಾನ ಹಾರಾಟ ಇಲ್ಲದಿರುವ ಹಿನ್ನಲೆಯಲ್ಲಿ ಭಾರತಕ್ಕೆ ಬರುವುದು ವಿಳಂಬವಾಗಬಹುದು.

ಕೊಲೆ,ಸುಲಿಗೆ, ಬೆದರಿಕೆ,ಕಳ್ಳ ಸಾಗಾಣಿಕೆ ಮುಂತಾದವುಗಳಲ್ಲಿ ಆರೋಪಿಯಾಗಿದ್ದ ಮುತ್ತಪ್ಪ ರೈ ವಿರುದ್ಧದ ಆರೋಪಗಳು ಖುಲಾಸೆಗೊಂಡಿದ್ದವು.

ಕೋರ್ಟ್‌ನಿಂದ ಆರೋಪ ಮುಕ್ತ ಆದ ಬಳಿಕ “ಜಯ ಕರ್ನಾಟಕ ಸೇನೆ” ಸ್ಥಾಪಿಸಿದ್ದರು.

ಬಿಡದಿಯ ಅವರ ಸ್ವಗೃಹದಲ್ಲಿ ಮಧ್ಯಾಹ್ನದ ಮೇಲೆ ಕುಟುಂಬದ ಸದಸ್ಯರಿಂದ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.

LEAVE A REPLY

Please enter your comment!
Please enter your name here