ಮಹಿಳೆಯರೇ ಈ ಲಕ್ಷಣಗಳಿದ್ದಲ್ಲಿ ನಿರ್ಲಕ್ಷಿಸದಿರಿ..!

ಮನುಷ್ಯನ ದೇಹವೆಂಬುವುದು ಒಂದು ದೇವಾಲಯದಂತೆ. ಪ್ರತಿಯೊಂದು ಅಂಗಾಂಗಗಳೂ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಅದರಲ್ಲೂ ಮೆದುಳು ಅತ್ಯಂತ ಪ್ರಮುಖವಾದ ಅಂಗ.

ದೇಹದ ಯಾವುದೇ ಅಂಗಾಂಗಗಳು ಸುಸೂತ್ರವಾದ ಚಲನೆಯನ್ನು ಹೊಂದಬೇಕು ಎಂದರೆ ಮೆದುಳಿನ ಸಂಜ್ಞೆ ಸರಿಯಾಗಿ ಇರಬೇಕು. ಇಲ್ಲವಾದರೆ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾಗುವುದು.

ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಮಿದುಳಿಗೆ ಪೋಷಣೆ ನೀಡುವ ಮತ್ತು ರಕ್ತವನ್ನು ಹೆಚ್ಚಿಸುವ ಕಬ್ಬಿಣಾಂಶದ ಆಹಾರವನ್ನು ಹೇರಳವಾಗಿ ಸೇವಿಸಬೇಕು. ಆಗ ವ್ಯಕ್ತಿಯು ಉತ್ತಮ ಆರೋಗ್ಯದಿಂದ ಉತ್ಸಾಹ ಶೀಲ ಪ್ರವೃತ್ತಿಯನ್ನು ಹೊಂದಿರಲು ಸಾಧ್ಯ.

ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಉತ್ತಮ ಕಬ್ಬಿಣಾಂಶಗಳು ಇದ್ದರೆ ರಕ್ತದಲ್ಲಿ ಕಬ್ಬಿಣಾಂಶದ ಹೆಚ್ಚುತ್ತದೆ. ಒಂದು ವೇಳೆ ನಮ್ಮ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಇದೆ ಎಂದಾದರೆ ಅದು ಅನೀಮಿಯಾ ಅಥವಾ ರಕ್ತಹೀನತೆಯ ಸೂಚನೆ.

ಯಾರ ದೇಹದಲ್ಲಿ ಅಗತ್ಯ ಪ್ರಮಾಣದಷ್ಟು ರಕ್ತವನ್ನು ಹೊಂದಿರುವುದಿಲ್ಲ ಅವರು ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು. ರಕ್ತದಲ್ಲಿ ಕಬ್ಬಿಣಾಂಶದ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ವ್ಯಕ್ತಿ ಮಾನಸಿಕವಾಗಿ ಒತ್ತಡ, ಸಿಟ್ಟು ಹಾಗೂ ನಿರಾಸಕ್ತಿ ತೋರುವುದನ್ನು ಕಾಣಬಹುದು.

ಮಹಿಳೆಯರೇ ಹೆಚ್ಚು !

ಕೆಲವು ಅಧ್ಯಯನ ಹಾಗೂ ಸಂಶೋಧನೆಯಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ಭಾರತದಲ್ಲಿ ಶೇ.50ರಷ್ಟು ಮಹಿಳೆಯರು ರಕ್ತ ಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಅದರಲ್ಲೂ ಗರ್ಭಿಣಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಬಹುದು. ರಕ್ತದಲ್ಲಿ ಕಬ್ಬಿಣದ ಕೊರತೆ ಇದ್ದಾಗ ರಕ್ತ ಹೀನತೆ ಸಮಸ್ಯೆಯು ಸಾಮಾನ್ಯವಾಗಿ ಕಾಡುವುದು. 

ರಕ್ತ ಹೀನತೆ ಎಂದರೇನು?

ದೇಹದಲ್ಲಿ ಆರೋಗ್ಯಕರವಾದ ಹಿಮೋಗ್ಲೋಬಿನ್ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಅದನ್ನು ರಕ್ತ ಹೀನತೆ ಎಂದು ಕರೆಯುವರು. ಮಹಿಳೆಯರಿಗೆ ಹಿಮೋಗ್ಲೋಬಿನ್‌ ಪ್ರಮಾಣ 12.5 ಗ್ರಾಂ ಹಾಗೂ ಪುರುಷರಲ್ಲಿ 13.5 ಗ್ರಾಂ ಇರಬೇಕು.

ರಕ್ತಹೀನತೆ ಇರುವಾಗ ಆಮ್ಲಜನಕದ ಸಾಗಣೆಗೆ ಅಡ್ಡಿಯಾಗುವುದು. ಅದನ್ನು ಸಾಗಿಸುವ ಸಾಮರ್ಥ್ಯವು ರಕ್ತದ ಕಣಗಳಿಗೆ ಇರುವುದಿಲ್ಲ. ಈ ಸಮಸ್ಯೆಯು ಮಾರಣಾಂತಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು. ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿ ಅಪೌಷ್ಟಿಕತೆಯ ಕಾರಣದಿಂದಾಗಿ ರಕ್ತಹೀನತೆಯು ಕಂಡುಬರುತ್ತದೆ.

ಕಾರಣಗಳು
 • ಫೋಲಿಕ್ ಆಮ್ಲದ ಕೊರತೆ
 • B12 ಅನ್ನಾಂಗ (ವಿಟಮಿನ್ ) ದ ಕೊರತೆ
 • ಕಬ್ಬಿಣಾಂಶದ ಕೊರತೆ
 • ರಕ್ತ ಕಣಗಳು ನಿರ್ದಿಷ್ಟ ರೋಗದಿಂದ ನಾಶವಾದಾಗ ಹೆಮೊಲೆಟಿಕ್ ರಕ್ತಹೀನತೆ (ಎನಿಮಿಯಾ)
 • ಗಾಯ ಮತ್ತು ರೋಗದಿಂದ ರಕ್ತ ನಾಶ
 • ಕಳಪೆ ಆಹಾರದಿಂದ ಅಪೌಷ್ಟಿಕತೆ
 • ಗರ್ಭಾವಸ್ಥೆಯಲ್ಲಿ ಅಸಮರ್ಪಕ ಆಹಾರ ಸೇವನೆ
 • ಮಹಿಳೆಯರಲ್ಲಿ ತೀವ್ರ ರಕ್ತಸ್ರಾವ

ಕಬ್ಬಿಣಾಂಶದ ಕೊರತೆಯಿರುವ ಲಕ್ಷಣಗಳು-
 • ದೇಹದಲ್ಲಿ ನಿಶ್ಯಕ್ತಿ
 • ತಲೆತಿರುಗುವಿಕೆ
 • ಏದುರುಸಿರು
 • ಪದೇ ಪದೇ ಕಾಡುವ ಸುಸ್ತು
 • ಮರೆವು, ಕೆಲಸದಲ್ಲಿ ನಿರಾಸಕ್ತಿ, ಕಿರಿಕಿರಿ
 • ಜಾಸ್ತಿ ಬಾಯಾರಿಕೆ.
 • ಪಾದ ಮತ್ತು ಅಂಗೈ ತಣ್ಣಗಿರುವುದು
 • ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳು
 • ಏನಾದರೂ ತಿನ್ನುವ ವಿಚಿತ್ರ ಬಯಕೆ (ಆವೆ ಮಣ್ಣು, ಬಳಪದ ಕಡ್ಡಿ, ಅಡುಗೆ ಸೋಡ) ಇಂತಹ ಪೋಷಕಾಂಶವಿಲ್ಲದ ಆಹಾರಗಳು
  ತಡೆಗಟ್ಟುವ ವಿಧಾನ
  ಕಬ್ಬಿಣಾಂಶ ಹೆಚ್ಚಿಸುವ ಆಹಾರ ಪದಾರ್ಥಗಳು ದೇಹದಲ್ಲಿ ರಕ್ತಹೀನತೆ ಅಥವಾ ಕಬ್ಬಿಣಾಂಶದ ಸಮಸ್ಯೆಯನ್ನು ಹೊಂದಿರುವಾಗ ತ್ವರಿತವಾಗಿ ಕಬ್ಬಿಣಾಂಶ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು.

    ಅದಕ್ಕೆ ಅದ್ಭುತವಾದ ಆಯ್ಕೆ ಎಂದರೆ ಕಾಳೆ ಸೊಪ್ಪು ಮತ್ತು ಹಸಿರು ಸೊಪ್ಪುಗಳು. ಹಸಿ ತರಕಾರಿ, ಬೆಟ್ಟದ ನೆಲ್ಲಿಕಾಯಿ, ಸೊಪ್ಪು ಮತ್ತು      ಹಣ್ಣುಗಳನ್ನು ತಿಂದರೆ ಅಗತ್ಯವಾದ ಕಬ್ಬಿಣಾಂಶವು ದೇಹಕ್ಕೆ ಸಿಗುವುದು.

    ಹಾಗೆಯೇ ಕ್ಯಾರೆಟ್‌, ಬೀಟ್ ರೂಟ್‌ ಜ್ಯೂಸ್‌, ಕಿತ್ತಳೆ ಜ್ಯೂಸ್‌  ಕುಡಿಯುವುದರಿಂದ ಸಹ ರಕ್ತದ ಉತ್ಪತ್ತಿ ಜಾಸ್ತಿಯಾಗುತ್ತದೆ. ಅಡುಗೆ        ಮಾಡುವಾಗ ಸಾಂಬಾರಿನ ಜೊತೆ ಬೆಲ್ಲ ಸೇರಿಸುವುದರಿಂದ ನಮ್ಮ ದೇಹಕ್ಕೆ ಕಬ್ಬಿಣದ ಅಂಶ ಸಿಗುತ್ತದೆ.

    ಕಬ್ಬಿಣಾಂಶ ಹೊಂದಿರುವ ಇತರ ಆಹಾರಗಳು ಸಿರಿ ಧಾನ್ಯಗಳು, ಬೀನ್ಸ್, ಬೀಜಗಳು, ಒಣಗಿದ ಹಣ್ಣುಗಳು ಉತ್ತಮ ಕಬ್ಬಿಣಾಂಶಗಳನ್ನು      ಒದಗಿಸುತ್ತವೆ. 


ಕಬ್ಬಿಣಾಂಶದ ಕೊರತೆ ಇರುವಾಗ ಸೇವಿಸಬಾರದ ಆಹಾರ ಪದಾರ್ಥಗಳು

ಕಬ್ಬಿಣಾಂಶ ಕೊರತೆಯ ಸಮಸ್ಯೆ ಇರುವ ವ್ಯಕ್ತಿಗಳು ಚಹಾ, ಕಾಫಿ ಮತ್ತು ಡೈರಿ ಉತ್ಪನ್ನಗಳನ್ನು ಮಿತವಾಗಿ ಸೇವಿಸಬೇಕು. ಇವುಗಳಲ್ಲಿ ಫ್ಯಾಟಿಕ್ ಅಮ್ಲವು ಅಧಿಕ ಪ್ರಮಾಣದಲ್ಲಿ ಇರುತ್ತವೆ.

ಫ್ಯಾಟಿಕ್ ಆಮ್ಲ ಇರುವಂತಹ ಆಹಾರ ಪದಾರ್ಥಗಳು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತವೆ. ಆಗ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶದ ಪೂರೈಕೆಗೆ ಅಡ್ಡಿ ಉಂಟಾಗುವುದು.

ಹಾಗಾಗಿ ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಕೊರತೆ ಇರುವವರು ಫ್ಯಾಟಿಕ್ ಆಮ್ಲದ ಆಹಾರವನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುವುದು.

LEAVE A REPLY

Please enter your comment!
Please enter your name here