“ಮಹಾರಾಷ್ಟ್ರ ತೀರ್ಪು”-ಬಿಜೆಪಿಗೆ ಬಿಗ್ ರಿಲೀಫ್ !

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಇದ್ದಕ್ಕಿದ್ದಂತೆ ಅವಕಾಶ ನೀಡಿದ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಎನ್‍ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂಕೋರ್ಟ್ ಸಹ ವಿಚಾರಣೆ ನಡೆಸಲು ರಿಜಿಸ್ಟರ್ ಮಾಡಿಕೊಂಡಿದೆ.ಈ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ನಲ್ಲಿ ೩ ರಿಟ್ ಅರ್ಜಿಗಳ ವಿಚಾರಣೆ ನಡೆಯಿತು, ರಾಜ್ಯಪಾಲರ ಪರ ತುಷಾರ್ ಮೆಹ್ತಾ, ಬಿಜೆಪಿ ಪರ ಮುಕುಲ್ ರೋಹ್ಟಗಿ, ಅಜಿತ್ ಪವಾರ್ ಪರ ಮಣಿಂದರ್ ಸಿಂಗ್ ಮತ್ತು  ಎನ್ ಸಿಪಿ  ,ಶಿವಸೇನೆ ಕಾಂಗ್ರೆಸ ಪರ ಕಪಿಲ್  ಸಿಬಲ್ ಹಾಗೂ ಮನು ಸಿಂಘ್ವಿ  ಇವತ್ತೇ ಬಹುಮತ ಸಾಬೀತಿಗೆ ಅವಕಾಶ ನೀಡಿ ಎಂದು ವಾದಿಸಿದರು.  ಅದಕ್ಕೆ ಪ್ರತಿವಾದ ಮಾಡಿದ ಮಹಾರಾಷ್ಟ್ರ ಬಿಜೆಪಿ ಪರ ಮುಕುಲ್ ರೋಹ್ಟಗಿ ಕಳೆದ ೧೭ ದಿನಗಳಿಂದ ಯಾಕೆ ಸುಮ್ಮನಿದ್ರಿ? ಬಹುಮತವಿದ್ದರೂ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ? ಅನುಚ್ಛೇದ ೩೬೧ ರ ಪ್ರಕಾರ ರಾಜ್ಯಪಾಲರು ಮತ್ತು ರಾಷ್ಟ್ರಪತಿಯನ್ನು ಯಾವುದೇ ನ್ಯಾಯಾಲಯ ಪ್ರಶ್ನಿಸುವಂತಿಲ್ಲ ಎಂದರು. ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ , ತಕ್ಷಣಕ್ಕೇ ಬಹುಮತ ಸಾಬೀತು ಇಲ್ಲ , ಸಿಎಂ ಘಡ್ನವಿಸ್, ಡಿಸಿಎಂ ಅಜಿತ್ ಪವಾರ್ ಸೇರಿ ೪ ಪಕ್ಷಗಳಿಗೂ ಸುಪ್ರೀಂಕೋರ್ಟ್ ನೋಟೀಸ್ ನೀಡಿದೆ. ಬಿಜೆಪಿಗೆ ಸರ್ಕಾರ ರಚನೆಗೆ ಹಕ್ಕು ಮಂಡನೆ ಮತ್ತು ಬಹುಮತ ಇದೆ ಎಂದು ರಾಜ್ಯಪಾಲರಿಗೆ ನೀಡಿರುವ ಪತ್ರಗಳನ್ನು ತರಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಸುಪ್ರೀಂ ಸೂಚನೆ ನೀಡಿದೆ. ಇದರಿಂದಾಗಿ ಘಡ್ನವಿಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

 

LEAVE A REPLY

Please enter your comment!
Please enter your name here