ಮಹಾರಾಷ್ಟ್ರದಲ್ಲಿ ಇಬ್ಬರು ಸಾಧುಗಳ ಹತ್ಯೆ – ಬಂಧಿತ ಕೊಲೆ ಆರೋಪಿಗಳ ಹೆಸರು ಬಹಿರಂಗ

Three people were lynched in Palghar , police officials of kasa investigating the spot in the Gadchinchle village. Express photo by DEEPAK JOSHI 17 April 2020, Thane,Maharashtra

ಮಹಾರಾಷ್ಟ್ರ ರಾಜ್ಯದ ಪಾಲ್ಗಾರ್‌ನಲ್ಲಿ ನಡೆದಿದ್ದ ಇಬ್ಬರು ಸಾಧುಗಳ ಹತ್ಯೆಯಲ್ಲಿ ಭಾಗಿ ಆಗಿರುವ ಆರೋಪಿಗಳ ಪಟ್ಟಿಯನ್ನು ಸರ್ಕಾರವೇ ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಬಂಧಿತ 101 ಮಂದಿ ಆರೋಪಿಗಳ ಹೆಸರುಗಳನ್ನು ಬಹಿರಂಗಗೊಳಿಸಿದ್ದಾರೆ.

ಬಂಧಿತ 101 ಮಂದಿಯಲ್ಲಿ ಒಬ್ಬರೇ ಒಬ್ಬರು ಮುಸ್ಲಿಮರು ಇಲ್ಲ ಎಂದಿರುವ ಸಚಿವರು ಕೃತ್ಯವನ್ನು ಕೋಮುದ್ವೇಷ ಹರಡುವುದಕ್ಕಾಗಿ ಬಳಸಿಕೊಳ್ಳದಂತೆ ಮನವಿ ಮಾಡಿದ್ದಾರೆ.

ಪಾಲ್ಗಾರ್‌ನಲ್ಲಿ ಮಕ್ಕಳ ಕಳ್ಳರು ಓಡಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ವದಂತಿಯನ್ನು ನಂಬಿ ಇಂತಹ ಹೀನ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ವದಂತಿಯನ್ನು ನಂಬದಂತೆ ಮತ್ತು ನಂಬಲರ್ಹ ಮೂಲಗಳಿಂದ ಸುದ್ದಿಗಳನ್ನು ದೃಢೀಕರಿಸಿಕೊಳ್ಳುವಂತೆಯೂ ಸಚಿವ ಅನಿಲ್‌ ದೇಶ್‌ಮುಖ್‌ ಮನವಿ ಮಾಡಿದ್ದಾರೆ.

ಇಬ್ಬರು ಸಾಧುಗಳು ಮತ್ತು ಅವರ ಡ್ರೈವರ್‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಆ ವೀಡಿಯೋದಲ್ಲಿ ಓಯೇ ಬಸ್‌ (ಸಾಕು) ಎಂಬ ಧ್ವನಿ ಕೇಳಿತ್ತು. ಆದರೆ ಶೋಯಬ್‌ ಬಸ್‌ ಎಂದು ಕೂಗುತ್ತಿದ್ದಾರೆ ಎಂದು ಹೇಳಿ ಜನರು ಆನ್‌ಲೈನ್‌ನಲ್ಲಿ ಶೇರ್‌ ಮಾಡಿದ್ರು. ಇಡೀ ರಾಜ್ಯವೇ ಕೊರೋನಾ ವೈರಸ್‌ ವಿರುದ್ಧ ಹೋರಾಡ್ತಿರಬೇಕಾದ್ರೆ ಕೆಲವರು ಕೋಮು ಬಣ್ಣ ಕೊಡುವ ಯತ್ನ ಮಾಡಿದರು ಎಂದು ಸಚಿವ ಅನಿಲ್‌ ದೇಶ್‌ಮುಖ್‌ ಹೇಳಿದ್ದಾರೆ.

ಏಪ್ರಿಲ್‌ 16ರಂದು ಪಾಲ್ಗಾರ್‌ ಜಿಲ್ಲೆಯಲ್ಲಿ 70 ವರ್ಷದ ಸಾಧು ಮಹಾರಾಜ ಕಲ್ಪವೃಕ್ಷಗಿರಿ, 35 ವರ್ಷದ ಸುಶೀಲ್‌ಗಿರಿ ಮಹಾರಾಜ ಮತ್ತು ಅವರ ಡ್ರೈವರ್‌ 30 ವರ್ಷದ ನಿತೇಶ್‌ ತೆಲ್ಗಡೆಯನ್ನು ಜನರ ಗುಂಪು ಬಡಿಗೆ ಬಡಿದು ಪೊಲೀಸರ ಎದುರಲ್ಲೇ ಭೀಕರವಾಗಿ ಹತ್ಯೆ ಮಾಡಿತ್ತು. ಈ ಮೂವರು ಮಹಾರಾಷ್ಟ್ರದಿಂದ ಗುಜರಾತ್‌ಗೆ ಹೋಗುತ್ತಿದ್ದರು. ಇವರನ್ನು ಕಿಡ್ನಿ ಕಳ್ಳರೆಂದು ವದಂತಿ ನಂಬಿ ಜನರೇ ಹತ್ಯೆ ಮಾಡಿದ್ದರು.

LEAVE A REPLY

Please enter your comment!
Please enter your name here