ಮರೆಯಾಗುತ್ತಿರುವ ಈ ನಟಿಮಣಿಯರು…..

ಸ್ಯಾಂಡಲ್‌ವುಡ್ ಬಹಳಷ್ಟು ನಟಿಮಣಿಯರನ್ನು ಪರಿಚಯಿಸಿದೆ, ಹೊರರಾಜ್ಯಗಳಿಂದ ಬಂದ ನಟಿಯರಿಗೂ ಇಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕಿ ನಂತರ ಪರಭಾಷಾ ಚಿತ್ರಗಳಲ್ಲಿ ಅವಕಾಶ ಸಿಕ್ಕಿ ಅಲ್ಲಿ ಮಿಂಚುತ್ತಿರುವವರೂ ಇದ್ದಾರೆ. ಇನ್ನೂ ಕೆಲವರು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿ ನಂತರ ಅವಕಾಶ ವಂಚಿತರಾಗಿ ಸಿನಿಮಾ ರಂಗದಿಂದಲೇ ದೂರ ಉಳಿದಿರುವವರೂ ಇದ್ದಾರೆ. ಯಾವ ನಟಿಯರು ಎಲ್ಲೆಲ್ಲಿದ್ದಾರೆ ?

1) ನಿಖಿತಾ ತುಕ್ರಲ್:‌ ಮಹಾರಾಜ ಎಂಬ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ನಂತರ ಯೋಧ, ವಂಶಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಗಳಲ್ಲಿ ನಟಿಸಿದ್ದರು. ನಂತರ ಮುಂಬೈ ಮೂಲದ ಉದ್ಯಮಿ ಗಗನ್‌ ಸಿಂಗ್‌ರನ್ನು ವಿವಾಹ ಆಗುವ ಮೂಲಕ ಸಿನಿಮಾಕ್ಕೆ ವಿದಾಯ ಹೇಳಿದ್ದಾರೆ.

2)ದೀಪಾ ಸನ್ನಿಧಿ : ಸಾರಥಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೊದಲನೇ ಚಿತ್ರದಲ್ಲೇ ಗಾಂಧಿ ನಗರಕ್ಕೆ ಲಗ್ಗೆ ಇಟ್ಟು ಭರವಸೆಯ ನಟಿ ಎನಿಸಿಕೊಂಡಿದ್ದರು.  ನಂತರ ಅವರು ಪರಮಾತ್ಮ, ಜಾನು, ಸಕ್ಕರೆ ಚಿತ್ರಗಳಲ್ಲಿ ನಟಿಸಿದರೂ ಇತ್ತೀಚೆಗೆ ಅವರು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

3)ಅಮೂಲ್ಯ : ಬಾಲನಟಿಯಾಗಿ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡ ಅಮೂಲ್ಯ “ಚೆಲುವಿನ ಚಿತ್ತಾರ” ಸಿನೆಮಾದಲ್ಲಿ ನಟಿಯಾಗಿ ಕಾಣಿಸಿಕೊಳ್ಳುವುದರ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಜಗದೀಶ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಈ ನಟಿ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ.

4) ಐಂದ್ರಿತಾ ರೇ :  2008 ರಲ್ಲಿ ತೆರೆಕಂಡ `ಮೆರವಣಿಗೆ’ ಚಿತ್ರದಿಂದ ನಾಯಕಿಯಾಗಿ ಕನ್ನಡ ಸಿನಿರಂಗ ಪ್ರವೇಶಿಸಿದರು. ಇವರಿಗೆ ಬಿಗ್ ಬ್ರೇಕ್ ನೀಡಿದ ಚಿತ್ರಗಳು -2009 ರಲ್ಲಿ ತೆರೆಕಂಡ`ಜಂಗ್ಲಿ’ ಮತ್ತು `ಮನಸಾರೆ’. ಮನಸಾರೆ ಚಿತ್ರದಲ್ಲಿನ ದೇವಕಿ ಪಾತ್ರಕ್ಕೆ ಪ್ರೇಕ್ಷಕ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ೨೦೧೮ ರಲ್ಲಿ ದಿಗಂತ್‌ ರನ್ನು ಕೈಹಿಡಿದ ಈ ನಟಿ ಸಧ್ಯಕ್ಕೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

5) ಶೃತಿ ಹರಿಹರನ್‌ : ಲೂಸಿಯಾ, ಗೋಧಿ ಬಣ್ಣ ಸಾಧಾರಣ ಮೈಕಟ್ಟು,  ಉರ್ವಿ, ನಾತಿಚರಾಮಿ, ಬ್ಯೂಟಿಫುಲ್ ಮನಸುಗಳು ಮುಂತಾದ ಚಿತ್ರಗಳಲ್ಲಿ ನಟಿಸಿ ಈಗ ತಮ್ಮ ಮಗಳು ಲಕ್ಷ್ಮಿಯ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

6)‌ ಪ್ರಣೀತಾ ಸುಭಾಷ್: 2010 ರಲ್ಲಿ ತೆರೆಕಂಡ ದರ್ಶನ್‌ರ `ಪೊರ್ಕಿ’ ಚಿತ್ರದಿಂದ ಸಿನಿಪಯಣ ಆರಂಭಿಸಿದ ಪ್ರಣೀತಾ ನಂತರ ಜರಾಸಂಧ, ಬ್ರಹ್ಮ, ಅಂಗಾರಕ ಚಿತ್ರಗಳಲ್ಲಿ ನಟಿಸಿದರೂ ಇತ್ತೀಚೆಗೆ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ.

LEAVE A REPLY

Please enter your comment!
Please enter your name here