ಮನೆ ಬಾಗಿಲಿಗೆ ಮದ್ಯ ಮಾರುವ ಬಗ್ಗೆ ಯೋಚಿಸಿ – ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ಸಲಹೆ

ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡುವಂತೆಯೂ ಮದ್ಯವನ್ನು ಹೋಂ ಡೆಲಿವರಿ ಮಾಡುವುದರ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್‌ ಸಲಹೆ ನೀಡಿದೆ.

ಲಾಕ್‌ಡೌನ್‌ ಹೊತ್ತಲ್ಲಿ ವೈನ್‌ಶಾಪ್‌, ಎಂಆರ್‌ಪಿ ಮತ್ತು ಮದ್ಯ ಮಳಿಗೆಗಳಲ್ಲಿ ನೇರ ಮದ್ಯ ಮಾರಾಟಕ್ಕೆ ಕೇಂದ್ರ ಗೃಹ ಸಚಿವಾಲಯ ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಯಿತು.

ನಾವು ಅಂತಹ ಆದೇಶವನ್ನು ಹೊರಡಿಸಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೋಕ್ಷ ಮಾರಾಟ ಅಥವಾ ಹೋಂ ಡೆಲಿವರಿಗೆ ರಾಜ್ಯಗಳನ್ನು ಯೋಚನೆ ಮಾಡುವಂತೆ ನ್ಯಾಯಮೂರ್ತಿ ಅಶೋಕ್‌ ಭೂಷಣ್‌, ನ್ಯಾಯಮೂರ್ತಿ ಸಂಜಯ್‌ ಕೌಲ್‌ ಮತ್ತು ನ್ಯಾಯಮೂರ್ತಿ ಬಿ ಆರ್‌ ಗವಾಯಿ ಪೀಠ ಅಭಿಪ್ರಾಯಪಟ್ಟಿತು.

LEAVE A REPLY

Please enter your comment!
Please enter your name here