ಮದುವೆ ವದಂತಿ ನಂಬಬೇಡಿ ಪ್ಲೀಸ್ – ನಟಿ ರಚಿತಾರಾಮ್ ಮನವಿ

ನನ್ನ ಮದುವೆ ಯಾರೊಂದಿಗೂ ನಿಶ್ಚಯವಾಗಿಲ್ಲ. ನಂಬಿ ಪ್ಲೀಸ್.. ಮದುವೆ ಮಾಡಿಕೊಳ್ಳುವ ಸಂದರ್ಭ ಬಂದಲ್ಲಿ ಅಭಿಮಾನಿಗಳೆಲ್ಲರಿಗೂ ತಿಳಿಸಿ ಗುರು ಹಿರಿಯರ ಸಮ್ಮುಖದಲ್ಲಿ, ಅವರ ಆಶೀರ್ವಾದ ಪಡೆದು ಆಗುತ್ತೇನೆ. ದಯವಿಟ್ಟು ಸುಳ್ಳು ಸುದ್ದಿಗಳನ್ನು ನಂಬಿ ವೈಯುಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲಿಗೆ ಈಡು ಮಾಡಬೇಡಿ.
– ರಚಿತಾ ರಾಮ್, ನಟಿ

ಗುಳಿಕೆನ್ನೆ ಚೆಲುವೆ ಹೀಗೆ ಮನವಿ ಮಾಡಿಕೊಳ್ಳಲು ಕಾರಣ ಇದೆ. ಕಳೆದ ಮೂರು ದಿನಗಳಿಂದ ರಚಿತಾ ರಾಮ್ ಮದುವೆ ಆಗುತ್ತಾರೆ ಎನ್ನುವ ಗಾಸಿಪ್ ಫೇಸ್‍ಬುಕ್, ಟ್ವಿಟ್ಟರ್, ಯೂಟ್ಯೂಬ್ ಸೇರಿ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಶೃಂಗೇರಿಯ ಶಾರದಾಂಬ ದೇವಾಲಯದಲ್ಲಿ `ದೊಡ್ಡ’ವರ ಕುಟುಂಬ ಐದು ದಿನಗಳ ಕಾಲ ಹೋಮ ಹವನ ಮಾಡಿಸಿತ್ತು. ಕಾಕತಾಳಿಯ ಎಂಬಂತೆ ಹೋಮದ ಪೂರ್ಣಾಹುತಿ ದಿನವೇ ನಟಿ ರಚಿತಾ ರಾಮ್ ಅದೇ ದೇಗುಲಕ್ಕೆ ಭೇಟಿ ಕೊಟ್ಟಿದ್ದರು.

ಅಲ್ಲದೇ ನಟ ನಿಖಿಲ್ ಬರ್ತ್‍ಡೇಗೆ ಶುಭ ಕೋರಿ ಟ್ವಿಟ್ಟರ್‍ನಲ್ಲಿ ಇಬ್ಬರು ಜೊತೆಗಿರುವ ಫೋಟೋ ಶೇರ್ ಮಾಡಿದ್ದರು.

ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಕುರಿತಂತೆ ನಟಿ ರಚಿತಾ ರಾಮ್ ಪರೋಕ್ಷವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here