ಮದುವೆ ಆಗಿದ್ದು ಮಗಳಿಗೆ.. ಹೆರಿಗೆ ಆಗಿದ್ದು ಅಮ್ಮನಿಗೆ..!

ಲಂಡನ್‍ನ ಮಹಿಳೆಯೊಬ್ಬರು ಮದುವೆ ಬಳಿಕ ತನಗಾದ ವಿಚಿತ್ರ ಅನುಭವ, ನಂಬಿಕೆ ದ್ರೋಹವನ್ನು ಶೇರ್ ಮಾಡಿದ್ದಾರೆ. ಲಾರೆನ್ ವಾಲ್ ಎಂಬಾಕೆ ಮದುವೆ ಬಳಿಕ ತನ್ನ ತಾಯಿಯನ್ನು ಹನಿಮೂನ್‍ಗೆ ಕರೆದೊಯ್ದಿದ್ದಳು. ಇದೆ ತನಗೆ ಮುಂದೆ ಮುಳುವಾಗುತ್ತದೆ ಎಂಬ ಸುಳಿವು ಲಾರೆನ್‍ಗೆ ಆ ಕ್ಷಣದಲ್ಲಿ ಸಿಕ್ಕಿರಲಿಲ್ಲ.

ಆಗಿದ್ದಿಷ್ಟು. ತನ್ನ ಮದುವೆಗೆ ಅಮ್ಮ 14 ಲಕ್ಷ ರೂಪಾಯಿ ಖರ್ಚು ಮಾಡಿದ್ದು ಕಂಡು ಲಾರೆನ್ ಖುಷಿ ಆಗಿದ್ದಳು. ಇದೇ ಖುಷಿಯಲ್ಲಿ, ಪತಿಯೊಂದಿಗೆ ತನ್ನ ತಾಯಿಯನ್ನು ಹನಿಮೂನ್‍ಗೆ ಲಾರೆನ್ ಕರೆದೊಯ್ದಳು. ಈ ಹಂತದಲ್ಲಿ ಲಾರೆನ್ ಗಂಡ, ಅತ್ತೆ ಜೊತೆ ಫುಲ್ ಕ್ಲೋಸ್ ಆಗಿಬಿಟ್ಟಿದ್ದ. ಆದರೂ, ಲಾರೆನ್‍ಗೆ ಯಾವುದೇ ಅನುಮಾನ ಬಂದಿರಲಿಲ್ಲ. ಇದಾದ 8 ತಿಂಗಳಿಗೆ ಲಾರೆನ್‍ಗೆ ಒಂದು ವಿಷಯ ತಿಳಿಯುತ್ತದೆ. ಅಷ್ಟು ಹೊತ್ತಿಗೆ ಲಾರೆನ್ ಪತಿ ಮನೆ ಖಾಲಿ ಮಾಡಿರುತ್ತಾನೆ. ತಾಯಿ ಜೊತೆಯೇ ಲಾರೆನ್ ಉಳಿದುಕೊಳ್ಳುತ್ತಾಳೆ.

9 ತಿಂಗಳ ನಂತರ ಲಾರೆನ್ ತಾಯಿ ಜೂಲಿಗೆ ಹೆರಿಗೆ ಆಗುತ್ತದೆ. ಆಗ ಆ ಮಗುವಿಗೆ ಅಪ್ಪ ಯಾರು ಎನ್ನುವ ಪ್ರಶ್ನೆ ಲಾರೆನ್‍ಗೆ ಹುಟ್ಟುತ್ತದೆ. ಪತಿ ಮೇಲೆ ಸಂಶಯ ಪಡುತ್ತಾಳೆ. ತಾಯಿಯನ್ನು ಪ್ರಶ್ನೆ ಮಾಡುತ್ತಾಳೆ. ಮೊದಲಿಗೆ ಲಾರೆನ್ ಅಮ್ಮ ಜೂಲಿ ಏನನ್ನು ಒಪ್ಪಿಕೊಳ್ಳುವುದಿಲ್ಲ. ಆಮೇಲೆ ಅಸಲಿ ವಿಷಯ ಬಹಿರಂಗ ಮಾಡುತ್ತಾಳೆ. ಆಗ ಲಾರೆನ್‍ಗೆ ನಿಂತ ನೆಲವೇ ಕುಸಿದ ಅನುಭವ ಆಗುತ್ತದೆ.

ಒಬ್ಬಳು ತಾಯಿ ತನ್ನ ಮಗಳ ವಿಚಾರದಲ್ಲಿ ಹೀಗೆ ಮಾಡಿದ್ದನ್ನು ಲಾರೆನ್‍ಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಇಂತಹ ತಾಯಿಯನ್ನು ಎಂದಿಗೂ ಕ್ಷಮಿಸಲಾರೆ ಎನ್ನುತ್ತಾಳೆ. ಯಾರ ಮೇಲೆ ಹೆಚ್ಚು ನಂಬಿಕೆ ಇಡುತ್ತೇವೋ ಅವರಿಂದಲೇ ಮೋಸ ಹೋಗುತ್ತೇವೆ ಎಂಬುದನ್ನು ಲಾರೆನ್ ಒತ್ತಿ ಹೇಳುತ್ತಾರೆ.

2004ರಲ್ಲಿ ಲಾರೆನ್‍ಗೆ ವಿವಾಹ ಆಗುತ್ತದೆ.2005ರಲ್ಲಿ ಲಾರೆನ್ ತಾಯಿ ಜೂಲಿಗೆ ಹೆರಿಗೆ ಆಗುತ್ತದೆ. 2009ರಲ್ಲಿ ಲಾರೆನ್ ತಾಯಿ ಜೂಲಿ ಮತ್ತು ಲಾರೆನ್ ಪತಿ ಪಾಲ್‍ನನ್ನ ಮದುವೆ ಆಗುತ್ತಾಳೆ. ವಿಶೇಷ ಅಂದರೆ, ಲಾರೆನ್ ಕೂಡ ಈ ಮದುವೆಗೆ ಹಾಜರಾಗುತ್ತಾಳೆ. ಆದರೆ, ಈ ಕ್ಷಣಕ್ಕೂ ಕೂಡ ಅಮ್ಮನೇ ತನ್ನ ಸಂಸಾರದಲ್ಲಿ ವಿಲನ್ ಆದಳು ಎಂಬುದನ್ನು ಅರಗಿಸಿಕೊಳ್ಳಲು ಲಾರೆನ್‍ಗೆ ಆಗುತ್ತಿಲ್ಲ.

ಹೀಗಾಗಿ ಒಂದು ದಶಕದ ಕಾಲ ತನ್ನ ಹೊಟ್ಟೆಯಲ್ಲೇ ಅದುಮಿಟ್ಟುಕೊಂಡಿದ್ದ ಸತ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾಳೆ ಲಾರೆನ್. ಪಾಪ.

LEAVE A REPLY

Please enter your comment!
Please enter your name here