ಮದುವೆ ಆಗಲು ಒಪ್ಪದ ಲೇಡಿ ಪಿಎಸ್‌ಐ ಹತ್ಯೆ, ಕೊಲೆಗಾರ ಎಸ್‌ಐ ಆತ್ಮಹತ್ಯೆ

ದೆಹಲಿಯಲ್ಲಿ ಮಹಿಳಾ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ರನ್ನು ಅವರ ಬ್ಯಾಚ್‌ಮೇಟ್‌ ಪೊಲೀಸ್‌ ಅಧಿಕಾರಿಯೇ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಶೂಟೌಟ್‌ ಮಾಡ್ಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ.

ಮದುವೆಯಾಗಲು ಒಪ್ಪದ ಕಾರಣಕ್ಕೆ ಹತ್ಯೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಿನ್ನೆ ರಾತ್ರಿ ೯.೩೦ಕ್ಕೆ ಕರ್ತವ್ಯದಿಂದ ಮನೆಗೆ ಮರಳುತ್ತಿದ್ದಾಗ ರೋಹಿಣಿ ಮೆಟ್ರೋ ಸ್ಟೇಷನ್‌ ೨೬ ವರ್ಷದ ಪ್ರೀತಿ ಅಹ್ಲಾವಾತ್‌ ಹತ್ಯೆಗೀಡಾಗಿದ್ದಾರೆ. ತಲೆಗೆ ಮೂರು ಗುಂಡು ಹೊಕ್ಕಿದ ಕಾರಣ ಪಿಎಸ್‌ಐ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ಈಕೆಯ ೨೦೧೮ರ ಬ್ಯಾಚ್‌ನ ಪೊಲೀಸ್‌ ಅಧಿಕಾರಿ ಆಗಿರುವ ದಿಪಾಂಶು ರಥಿ ಪ್ರೀತಿಯನ್ನು ಹತ್ಯೆ ಮಾಡಿದ ಬಳಿಕ ಹರ್ಯಾಣದ ಸೋನಿಪಾತ್‌ಗೆ ಹೀಗಿ ಅಲ್ಲಿ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಕಾರು ಇನ್‌ಸೈಡ್‌ನಲ್ಲಿ ಲಾಕ್‌ ಆಗಿತ್ತು. ಮತ್ತು ಹೆಡ್‌ಲೈಟ್‌ ಆನ್‌ ಆಗಿತ್ತು.

a6bnt4l8

ಪ್ರೀತಿ ಅಹ್ಲವಾತ್‌ ಪ್ರತಾಪರ್‌ಗಂಜ್‌ ಇಂಡಸ್ಟ್ರಿಯಲ್‌ ಏರಿಯಾ ಸ್ಟೇಷನ್‌ನಲ್ಲಿ ಎಸ್‌ಐ ಆಗಿ ನಿಯೋಜನೆಗೊಂಡಿದ್ದರು. ದಿಪಾಂಶು ಮದುವೆ ಆಗುವಂತೆ ಪ್ರೀತಿಗೆ ದುಂಬಾಲು ಬಿದ್ದಿದ್ದ. ಆದರೆ ಆಕೆ ಮದುವೆಯ ಪ್ರಸ್ತಾಪವನ್ನು ಒಪ್ಪಿರಲಿಲ್ಲ.

LEAVE A REPLY

Please enter your comment!
Please enter your name here