ಮತ್ತೊಮ್ಮೆ ಸಿದ್ದರಾಮಯ್ಯನವರೇ ಸಿಎಂ ಆಗಬೇಕು- ಶಾಸಕ ರಾಮಪ್ಪ

ರಾಜ್ಯ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ತೀವ್ರವಾಗಿದ್ದು, ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹರಿಹರ ಶಾಸಕ ರಾಮಪ್ಪ ಸಿದ್ದರಾಮಯ್ಯನ ಪರ ಬ್ಯಾಟ್ ಬೀಸಿದ್ದಾರೆ.

ಕಾಂಗ್ರೆಸ್ ಹೈ ಕಮಾಂಡ್ ಎಚ್ಚರಿಕೆಗೆ ರಾಜ್ಯ ಕಾಂಗ್ರಸ್ ಕ್ಯಾರೆ ಎನ್ನದೆ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ.  ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಹರಿಹರ ಶಾಸಕ ರಾಮಪ್ಪ, ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎನ್ನುವುದು ರಾಜ್ಯದ ಜನರ ಅಭಿಪ್ರಾಯ ಇದೇ ಆಗಿದೆ. ನಮ್ಮ ಶಾಸಕರ ಅಭಿಪ್ರಾಯವೂ ಇದೇ ಆಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಇನ್ನೂ ವಯಸ್ಸಿದೆ. ಅವರು ಮುಂದೆ ಬೇಕಾದರೆ ಸಿಎಂ ಆಗಬಹುದು ಎಂದು ಹೇಳಿಕೆ ನೀಡಿದ್ದಾರೆ.

ಹಿಂದಿನ ಅವಧಿಯಲ್ಲಿ  ಸಿದ್ದರಾಮಯ್ಯನವರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಅದಕ್ಕೆ 2023 ಕ್ಕೆ ಅವರೇ ಆದರೆ ಒಳ್ಳೆಯದು ಎಂಬುದು ನಮ್ಮ ಆಸೆ. ಇದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಮಪ್ಪ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here