ಸೋಮವಾರದಿಂದ ಅಂದರೆ ಮೇ ೪ರಿಂದ ಮತ್ತೆ ಎರಡು ವಾರಗಳ ಕಾಲ ಅಂದರೆ ಮೇ ೧೭ರವರೆಗೆ ಲಾಕ್ಡೌನ್ ವಿಸ್ತರಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆದೇಶ ನೀಡಿದೆ.
ರೆಡ್ಝೋನ್, ಆರೆಂಜ್ಝೋನ್ ಮತ್ತು ಗ್ರೀನ್ಝೋನ್ ಮೂರು ಝೋನ್ಗಳಲ್ಲೂ ಮೇ ೧೭ರವರೆಗೆ ಈ ಕೆಳಕಂಡ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಮತ್ತು ಅಗತ್ಯ ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ.
೧) ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಶಿಯ ವಿಮಾನಗಳ ಹಾರಾಟ ಇರಲ್ಲ
೨) ರೈಲುಗಳ ಓಡಾಟ ಇರಲ್ಲ (ಗೂಡ್ಸ್ ರೈಲು ಹೊರತುಪಡಿಸಿ)
೩) ಮೆಟ್ರೋ ರೈಲುಗಳ ಓಡಾಟ ಬಂದ್
೪) ರಾಜ್ಯಗಳ ನಡುವೆ ಬಸ್ ಸಂಚಾರ ಇಲ್ಲ
೫) ರಾಜ್ಯಗಳ ನಡುವೆ ಜನರು ಓಡಾಡುವಂತಿಲ್ಲ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಂತಿಲ್ಲ
೬) ಶಾಲೆ-ಕಾಲೇಜು, ಕೋಚಿಂಗ್ ಸೆಂಟರ್ಗಳು ಬಂದ್
೭) ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡು ಎಲ್ಲ ರೀತಿಯ ಪ್ರಾರ್ಥನಾ ಮಂದಿರಗಳೂ ಬಂದ್ʼ
೮) ಲಾಡ್ಜ್, ಪ್ರವಾಸಿ ತಾಣಗಳು ಬಂದ್
೯) ಮಾಲ್, ಥಿಯೇಟರ್, ಜಿಮ್, ಪಾರ್ಕ್, ರೆಸ್ಟೋರೆಂಟ್, ಸೆಮಿನಾರ್, ಸ್ವಿಮ್ಮಿಂಗ ಪೂಲ್ ಬಂದ್
೮) ಎಲ್ಲಾ ರೀತಿಯ ಸಾಮಾಜಿಕ-ಧಾರ್ಮಿಕ-ರಾಜಕೀಯ-ಸಾಂಸ್ಕೃತಿಕ ಸಭೆ ಸಮಾರಂಭಗಳೂ ಬಂದ್
[…] […]