ಮತ್ತಷ್ಟು ಕುಸಿತ ಕಂಡ ರೈಲ್ವೆ ಇಲಾಖೆ ಆದಾಯ

ಭಾರತೀಯ ರೈಲ್ವೆಗೆ ಪ್ರಯಾಣಿಕರ ಮೂಲದಿಂದ ಬರುವ ಆದಾಯ ಮೂರನೇ ತ್ರೈಮಾಸಿಕ ಅವಧಿಯಲ್ಲಿ 400 ಕೋಟಿ ರೂಪಾಯಿ ಇಳಿಕೆ ಆಗಿದೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಇದೇ ಮೂಲದಿಂದ ಬರುವ ಆದಾಯ 155 ಕೋಟಿ ರೂಪಾಯಿಯಷ್ಟು ಕಡಿಮೆ ಆಗಿತ್ತು.

2019-20ನೇ ಸಾಲಿನ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪ್ರಯಾಣಿಕರ ಮೂಲದಿಂದ ರೈಲ್ವೆಗೆ 13,368 ಕೋಟಿ ರೂಪಾಯಿ ಆದಾಯ ಬಂದಿತ್ತು. ಆದ್ರೆ ಈ ಆದಾಯ ಎರಡನೇ ತ್ರೈಮಾಸಿಕ ಅವಧಿಯಲ್ಲಿ 12,243 ಕೋಟಿ ರೂಪಾಯಿಗೂ, ಅಕ್ಟೋಬರ್‌-ಡಿಸೆಂಬರ್‌ ಒಳಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ೧೨,೮೪೪ ಕೋಟಿ ರೂಪಾಯಿ ಕುಸಿತ ಕಂಡಿತ್ತು.

ಆದರೆ ಸರಕು ಸಾಗಾಣಿಕೆ ವಲಯದಿಂದ ಬರುವ ಆದಾಯದಲ್ಲಿ ಚೇತರಿಕೆ ಆಗಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ 29,066 ಕೋಟಿ ರೂಪಾಯಿ, ಎರಡನೇ ತ್ರೈಮಾಸಿಕ ಅವಧಿಯಲ್ಲಿ 25,165 ಕೋಟಿ ರೂಪಾಯಿ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ 28,032 ಕೋಟಿ ರೂಪಾಯಿ ಆದಾಯ ಗಳಿಸಿದೆ.

LEAVE A REPLY

Please enter your comment!
Please enter your name here