ಮಟ್ಕಾ ಅಶ್ವತ್ ಪಟಾಲಂ ದೌರ್ಜನ್ಯಕ್ಕೆ ಕೊನೆ ಯಾವಾಗ..? ದಂಪತಿ ಮೇಲೆ ಹಲ್ಲೆ..

ಪಾವಗಡದ ಮಟ್ಕಾ ಅಶ್ವತ್ ಪಟಾಲಂ ನಡೆಸುತ್ತಿರುವ. ದೌರ್ಜನ್ಯಕ್ಕೆ ಕೊನೆಯೇ ಇಲ್ಲವಾಗಿದೆ. ಮಟ್ಕಾ ದಂಧೆ ವಿರುದ್ಧ ಫೇಸ್ ಬುಕ್ ನಲ್ಲಿ ದನಿ ಎತ್ತಿದ ಕಾರಣಕ್ಕೆ ಕೃಷ್ಣಾಪುರದ ದಿವಾಕರ್ ದಂಪತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ.

ಪಾವಗಡ ಯೂತ್ ಕಾಂಗ್ರೇಸ್ ಉಪಾಧ್ಯಕ್ಷನಾದ, ಮಟ್ಕಾ ಅಶ್ವತ್ ಪುತ್ರ ಕಿರಣ್ ತಮ್ಮ ಹಿಂಬಾಲಕರೊಂದಿಗೆ ಶುಕ್ರವಾರ ರಾತ್ರಿ 9.00 ಗಂಟೆ ಸಮಯದಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಕೃಷ್ಣಾಪುರ ಗ್ರಾಮಕ್ಕೆ ಆಗಮಿಸಿ ದಿವಾಕರ್ ಮತ್ತು ಅವರ ಕುಟುಂಬಸ್ಥರ ಮೇಲೆ ಗೂಂಡಾಗಿರಿ ಮಾಡಿದ್ದಾರೆ.

ದಿವಾಕರ್ ಮತ್ತು ಅವರ ಧರ್ಮಪತ್ನಿ ನಾಗಮಣಿ ಅವರನ್ನು ಎಳೆದಾಡಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಬಟ್ಟೆ ಹರಿಯುವಂತೆ ದಿವಾಕರ್ ಮೇಲೆ ಅಟ್ಯಾಕ್ ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಅಗಿಲ್ಲ ಎಂಬ ಅರೋಪ ಕೇಳಿ ಬಂದಿದೆ.

ಕಳೆದ ಮೂರು ದಶಕಗಳಿಂದ ಪಾವಗಡದಲ್ಲಿ ಅವ್ಯಾಹತವಾಗಿ ಮಟ್ಕಾ ದಂಧೆ ನಡೆಸಿಕೊಂಡು ಬರುತ್ತಿರುವ ಮಟ್ಕಾ ಅಶ್ವತ್ ಗೆ ಯಾರು ತಡೆ ಹಾಕಲು ಸಾಧ್ಯವಾಗಿಲ್ಲ. ಆಳುವ ಮಂದಿಯ ಕೃಪಾಕಟಾಕ್ಷದೊಂದಿಗೆ ದಂಧೆ ಮಾಡಿಕೊಂಡು ಬರುತ್ತಿದ್ದಾರೆ.

LEAVE A REPLY

Please enter your comment!
Please enter your name here