ಮಗನನ್ನೇ ಮದುವೆಯಾದ ಮಹಿಳೆ..! ಅಸಲೀ ಕಥೆ ಏನು..?

ಇತ್ತೀಚಿಗೆ ಸೋಷಿಯಲ್ ಮೀಡಿಯಾಗಳಾದ ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೌದಿ ಅರೇಬಿಯಾದ ಮಹಿಳೆಯೊಬ್ಬರು ಪತಿ ಸಾವನ್ನಪ್ಪಿದ ಕಾರಣ ಸ್ವಂತ ಮಗನನ್ನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಮಗ ಮತ್ತು ತಾಯಿಯ ಫೋಟೋ ವೈರಲ್ ಆಗಿತ್ತು. ಆದರೆ…,

ಈ ಫೋಟೋ ಹಿಂದಿನ ಸತ್ಯ ಕಥೆಯನ್ನು ಮಹ್ಮದ್ ಜುಬೇರ್ ಎನ್ನುವವರು ಬಯಲು ಮಾಡಿದ್ದಾರೆ. ಇಸ್ಲಾಮಿಕ್ ಬರಹದೊಂದಿಗೆ ಟ್ವೀಟ್ ಮಾಡಲಾದ ಈ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜನವರಿ 31ರಂದು ಫೋಟೋ ಫೇಸ್‍ಬುಕ್‍ನಲ್ಲಿ ಪೋಸ್ಟ್ ಆಗಿರುವುದು ಕಂಡುಬಂದಿದೆ.

ಫೋಟೋದಲ್ಲಿ ಉರ್ದು ಬರಹ ಇದ್ದು, ಅದರಲ್ಲಿ ಇಂದು ನನ್ನ ಮಗ ಖುರಾನ್ ಪಠಣವನ್ನು ಪೂರ್ತಿ ಮಾಡಿದ ಎಂದು ವಿವರಿಸಲಾಗಿತ್ತು ಎಂದು ಜುಬೇರ್ ವಿವರಿಸಿದ್ದಾರೆ. ಈ ಫೋಟೋವನ್ನು ಫೇಕುದಾರರು ಮಗನನ್ನೇ ಮದುವೆಯಾದ ತಾಯಿ ಎಂಬುದಾಗಿ ಸುಳ್ಳು ಸುದ್ದಿ ಹರಡಿಸಿದರು ಎಂದು ಜುಬೇರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here