ಮಕ್ಕಳ ಪಾಲನೆಯಲ್ಲಿ ಯಾರಿಗೆ ಹೆಚ್ಚು ಒತ್ತಡ , ಯಾರಿಗೆ ಖುಷಿ..?

ಮಗುವಿನ ಪೋಷಣೆಯಲ್ಲಿ ತಂದೆ ಮತ್ತು ತಾಯಿ ಇಬ್ಬರ ಪಾತ್ರವೂ ಬಹಳ ಮುಖ್ಯ. ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆಯ ಹಿನ್ನಲೆಯಲ್ಲಿ ಮಕ್ಕಳ ಪಾಲನೆ- ಪೋಷಣೆಗೆ ಸಂಬಂಧಪಟ್ಟಂತೆ ಹೆಚ್ಚಿನ ಜವಾಬ್ದಾರಿಗಳು ತಂದೆ- ತಾಯಂದಿರ ಮೇಲೆ ಬೀಳುತ್ತಿರುವುದು ಸಹಜವಾಗಿದೆ. ಅಧ್ಯಯನವೊಂದರ ಪ್ರಕಾರ ತಂದೆಯು ತನ್ನ ಮಗುವಿನ ಪಾಲನೆಯಲ್ಲಿ ಅನುಭವಿಸಿದಷ್ಟು ಸಂತೋಷ ತಾಯಿಯಂದಿರು ಅನುಭವಿಸುವುದಿಲ್ಲವಂತೆ! ಹೌದು, ತಾಯಿಯು ತನ್ನ ಮಗುವಿನ ಪಾಲನೆಯ ಸಂಧರ್ಭದಲ್ಲಿ ತಂದೆಗಿಂತ ಹೆಚ್ಚು ಒತ್ತಡ ಅನುಭವಿಸುತ್ತಾಳಂತೆ! ಇತ್ತೀಚೆಗೆ ನ್ಯೂಯಾರ್ಕ್‌ನ ಕಾರ್ನೆಲ್‌ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನವೊಂದರ ಪ್ರಕಾರ ತಾಯಿಗಿಂತ ಹೆಚ್ಚು ಸಂತಸದ ಕ್ಷಣಗಳನ್ನು ತಂದೆ ಅನುಭವಿಸುತ್ತಾನೆ ಎಂಬ ಅಂಶ ಕಂಡುಬಂದಿದೆ.

ಯಾಕೆ ಹೀಗಾಗುತ್ತದೆ?

ಮಗುವಿನ ಪೋಷಣೆಯ ಸಮಯದಲ್ಲಿ ತಾಯಿಯಂದಿರು ಹೆಚ್ಚಾಗಿ  ಮಗುವಿನ ಮೂಲಭೂತ ಅಗತ್ಯಗಳ ಕಡೆಗೆ ಹೆಚ್ಚಿನ ಗಮನ ವಹಿಸುವುದರಿಂದ ನಿದ್ದೆಯ ಅಭಾವ, ಸ್ವಆರೈಕೆ ಮುಂತಾದವುಗಳಲ್ಲಿ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ತಂದೆಗೆ ಹೋಲಿಸಿದರೆ ತಾಯಿ ಮಾನಸಿಕವಾಗಿ ಹೆಚ್ಚಿನ ಒತ್ತಡ ಮತ್ತು ಅವಿಶ್ರಾಂತ ದಿನಗಳನ್ನು ಅನುಭವಿಸುತ್ತಾಳೆ.

ಅದರರ್ಥ ತಾಯಿ ಮಗುವಿನ ಜೊತೆ ಪಾಲನೆಯಲ್ಲಿ ಸಂತೋಷವನ್ನು ಅನುಭವಿಸುವುದಿಲ್ಲವೆಂದಲ್ಲ ತಂದೆಗೆ ಹೋಲಿಸಿದರೆ ಕಡಿಮೆ . 

ಅಧ್ಯಯನ ಏನು ಹೇಳುತ್ತದೆ?

ಕಾರ್ನೆಲ್‌ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನದಲ್ಲಿ 18 ವರ್ಷದ ಸುಮಾರು 12,000 ಕ್ಕೂ ಹೆಚ್ಚು ಪೋಷಕರಿಂದ ಮಾಹಿತಿ ಸಮಗ್ರಹಿಸಲಾಗಿತ್ತು. ಆ ಪ್ರಕಾರ ಮಹಿಳೆಯರಿಗೆ ಮತ್ತು ಪುರುಷರಿಗೆ ದಿನದ ಯಾವುದಾದರೂ 3 ಗಂಟೆಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವ ವೇಳೆ ತಮ್ಮ ಭಾವನೆಗಳ ಬಗ್ಗೆ  ಒಂದು ಡೈರಿಯಲ್ಲಿ ದಾಖಲಿಸುವಂತೆ ಹೇಳಲಾಗಿತ್ತು. 

 ಮುಖ್ಯವಾಗಿ ಪೋಷಕರು ಅವರ ಮಕ್ಕಳ ಜೊತೆ ಇರುವಾಗ ಏನು ಚಟುವಟಿಕೆಯಲ್ಲಿ ತೊಡಗಿರುತ್ತಾರೋ ಮತ್ತು ಮಕ್ಕಳು ಅವರ ಜೊತೆಯಿಲ್ಲದಿರುವಾಗಅದೇ ಚಟುವಟಿಕೆಯನ್ನು ಮಾಡುವಾಗ ಹೇಗೆ ಅನಿಸಿತು ಎಂಬುವುದರ ಮೇಲೆ ಗಮನವಿರಿಸಿಕೊಂಡು ಈ ಅಧ್ಯಯನವನ್ನು ಮಾಡಲಾಗಿತ್ತು. 

ಅದರ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಮಕ್ಕಳೊಂದಿಗೆ ಇದ್ದ ಸಮಯದಲ್ಲಿ ಕಡಿಮೆ ಮಟ್ಟದ ಸಂತೋಷ ಮತ್ತು ಹೆಚ್ಚಿನ ಒತ್ತಡ ಮತ್ತು ಆಯಾಸ ಅನುಭವಿಸಿದ್ದರೆಂಬ ಅಂಶ ಕಂಡುಬಂದಿದೆ.

ಅಧ್ಯಯನದ ಪ್ರಕಾರ ತಾಯಿಯಂದಿರು ಮಗುವಿನ ಜೊತೆಯಿರಬೇಕಾದರೇ ಪುರುಷರು ಅತೀ ಹೆಚ್ಚು ಸಮಯವನ್ನು ಮಗುವಿನೊಂದಿಗೆ ಕಳೆಯುತ್ತಾರೆ. ಇದರ ಅರ್ಥ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಮಹಿಳೆಯರಿಗಿಂತ ಕಡಿಮೆ ಬಾರಿ ಏಕಪೋಷಕರ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ದಿನವಿಡೀ ತಾಯಿಯು ಮಗುವಿನ ಜೊತೆ  ಹೆಚ್ಚಿನ ಸಮಯ ಕಳೆಯುವುದರಿಂದ ಮಗುವಿನ ಬೇಕು ಬೇಡಗಳ ಕಡೆಗೆ ಆಕೆ ಹೆಚ್ಚಿನ ಗಮನ ಕೊಟ್ಟಿರುತ್ತಾಳೆ,ಹೀಗಾಗಿ ತಂದೆಗೆ ಹೆಚ್ಚಿನ ಒತ್ತಡ ಅಥವಾ ಆಯಾಸವೆನಿಸುವುದಿಲ್ಲ.

LEAVE A REPLY

Please enter your comment!
Please enter your name here