ಮಂಗಳೂರು ಬಾಂಬರ್ ಅರೆಸ್ಟ್..!

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಪಟಾಕಿ ಬಾಂಬ್ ಇರಿಸಿ ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಡುಪಿ ಜಿಲ್ಲೆ ಮಣಿಪಾಲದ ನಿವಾಸಿ ಆದಿತ್ಯರಾವ್ ಎಂದು ಗುರುತಿಸಲಾಗಿದೆ

ಏರ್‍ಪೋರ್ಟ್‍ನಲ್ಲಿ ಶಂಕಿತ ಓಡಾಡುವ ಸಿಸಿಟಿವಿ ದೃಶ್ಯಗಳನ್ನು ನಿನ್ನೆಯಷ್ಟೇ ಪೊಲೀಸರು ಬಿಡುಗಡೆ ಮಾಡಿದ್ದರು. ಇದು ಸಂಚಲನ ಸೃಷ್ಟಿಸಿತ್ತು. ತಾನು ಸಾರ್ವಜನಿಕರ ಕಣ್ಣಿಗೆ ಬಿದ್ದರೆ ಹಣ್ಣುಗಾಯಿ ನೀರುಗಾಯಿ ಮಾಡುತ್ತಾರೆ ಎಂಬ ಭಯದಿಂದ ಇಂದು ಬೆಳಗ್ಗೆ ಬೆಂಗಳೂರಿನಲ್ಲಿರುವ ಡಿಜಿಐಜಿಪಿ ನೀಲಮಣಿರಾಜು ಅವರ ಕಚೇರಿಗೆ ಹೋಗಿ ಶರಣಾಗಿದ್ದಾನೆ. ಕೂಡಲೇ ಆದಿತ್ಯ ರಾವ್‍ನನ್ನ ಹಲಸೂರು ಗೇಟ್ ಠಾಣೆಗೆ ಪೊಲೀಸರು ಕರೆದೊಯ್ದಿದ್ದು ಪ್ರಾಥಮಿಕ ಹಂತದ ವಿಚಾರಣೆ ನಡೆಸುತ್ತಿದ್ದಾರೆ.

ವೈಯುಕ್ತಿಕ ದ್ವೇಷದಿಂದ ತಾನು ಏರ್‍ಪೋರ್ಟ್ ಸಿಬ್ಬಂದಿಯನ್ನು ಭಯಪಡಿಸಲು ಅಷ್ಟೇ ಪಟಾಕಿ ಬಾಂಬ್ ಇರಿಸಿದ್ದೆ. ತನಗೆ ಯಾವುದೇ ಜೀವ ಹಾನಿ ಮಾಡುವ ಉದ್ದೇಶವಿರಲಿಲ್ಲ ಎಂದು ಆರೋಪಿ ಆದಿತ್ಯರಾವ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here