ಮಂಗಳೂರು: ನಗರದ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ, ಕಾಶ್ಯ ವಾರ್ಡ್ ಇವರ ಸಹಯೋಗದೊಂದಿಗೆ ಕಾಶ್ಯ ಪೇಟೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭವು ಸಂತ ರೀಟಾ ವಿದ್ಯಾಸಂಸ್ಥೆ ಕಾಸ್ಸಿಯಾ ಶಾಲಾ ಸಭಾಭವನದಲ್ಲಿ ಜರಗಿತು.
ಎನ್.ಎಸ್.ಎಸ್ ಶಿಬಿರ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡಿದ ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಶ್ರೀಮತಿ ಭಾನುಮತಿ ಇವರು ರಾಷ್ಟಿಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಮಯ ಪ್ರಜ್ಞೆ, ಸಾಮರಸ್ಯ ಗುಣಗಳನ್ನು ಬೆಳೆಸಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದರು.
ಸಂತ ರೀಟಾ ವಿದ್ಯಾಸಂಸ್ಥೆಯ ಸಂಚಾಲಕರು ವಂದನೀಯ ಗುರು ಎರಿಕ್ ಕ್ರಾಸ್ತಾ ಆಶೀರ್ವಚನ ನೀಡಿ ಶ್ರಮದ ಜೊತೆಯಲ್ಲಿ ಜೀವನ ಮೌಲ್ಯಗಳನ್ನು ಕಲಿಯಬೇಕು ಸ್ವಾರ್ಥರಹಿತ ಬದುಕನ್ನು ಎನ.ಎಸ್.ಎಸ್ ಶಿಬಿರ ಕಲಿಸುತ್ತದೆ ಎಂದರು ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರು ವಂದನೀಯ ಗುರು ಮೈಕಲ್ ಮಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್ ನ ಧ್ಯೇಯ ಉದ್ದೇಶಗಳು ಮತ್ತು ಪ್ರಾಧಾನ್ಯತೆಯನ್ನು ವಿವರಿಸಿದರು. ಪದವಿ ಕಾಲೇಜು ಪ್ರಾಂಶುಪಾಲ ಮೆಲ್ವಿನ್ ವಾಸ್ ಮಾತನಾಡಿ, ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸ್ವಾವಲಂಬನೆಯನ್ನು ರೂಪಿಸಿಕೊಳ್ಳಬೇಕು ಎಂದರು.
ಕಾಸ್ಸಿಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಎವರೆಸ್ಟ್ ಕ್ರಾಸ್ತಾ ಮತ್ತು ಸಂತ ರೀಟಾ ಚರ್ಚಿನ ಉಪಾಧ್ಯಕ್ಷರು ಜೇನ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶ್ರೀ ಕಿರಣ್ ಡಿಸೋಜ ಸ್ಮರಣಿಕೆಯನ್ನು ನೀಡಿ ಸ್ವಾಗತಿಸಿದರು,ಯಶೋಧ ಕಾರ್ಯಕ್ರಮವನ್ನು ನಿರೂಪಿಸಿ, ಎನ್.ಎಸ್.ಎಸ್.ಘಟಕದ ನಾಯಕ ಪವನ್ ಪಿ.ಶೆಟ್ಟಿ ವಂದಿಸಿದರು.