ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ

ಮಂಗಳೂರು ಪೊಲೀಸರ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 5,00,000 ರೂ.ಗಳ ಪರಿಹಾರ ಘೋಷಿಸಿದ್ದಾರೆ.

ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ಘೋಷಿಸಿದ್ದ ಪರಿಹಾರವನ್ನು ಯಡಿಯೂರಪ್ಪ ಸರ್ಕಾರ ವಾಪಸ್ ತೆಗೆದುಕೊಂಡ ಒಂದೇ ದಿನದಲ್ಲಿ ಮಮತಾ ಬ್ಯಾನರ್ಜಿ ಹಣಕಾಸಿನ ನೆರವು ಕೊಟ್ಟು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ನಮ್ಮದು ಶ್ರೀಮಂತ ಪಕ್ಷ ಅಲ್ಲ ಆದರೆ ನಮ್ಮ ಪಕ್ಷ ಮತ್ತು ಪಕ್ಷದ ಕಾರ್ಮಿಕ ಸಂಘಟನೆಯ ನಿಯೋಗ ಮಂಗಳೂರಿಗೆ ತೆರಳಿ ಕುಟುಂಬ ಸದಸ್ಯರಿಗೆ 5,00, 000  ಚೆಕ್ಕನ ಹಸ್ತಾಂತರಿಸಲು ಇದೆ ಎಂದು ಕೊಲ್ಕತ್ತಾದಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ರಾಲಿಯಲ್ಲಿ ಮಮತಾ ಬ್ಯಾನರ್ಜಿ ಹೇಳಿದರು.

ಕರ್ನಾಟಕದ ಮುಖ್ಯಮಂತ್ರಿಯನ್ನು ನೋಡಿ. ಗೋಲಿಬಾರ್ ನಲ್ಲಿ ಸತ್ತವರಿಗೆ ತಲಾ 10 ಲಕ್ಷ ರೂಪಾಯಿ ಘೋಷಿಸಿದ್ದರು. ಆದರೆ ಸತ್ತವರು ಕ್ರಿಮಿನಲ್ಗಳು ಅಂತ ಹೇಳಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಯಡಿಯೂರಪ್ಪ ನಿರ್ಧಾರ ನಾಚಿಕೆಗೇಡಿನ ದ್ದು. ನೀವು ಒಂದು ದಿನ ಮಾತುಕೊಟ್ಟು ಮರುದಿನವೇ ಅದನ್ನು ಮರೆಯುತ್ತೀರಿ ಎಂದರೆ ಅದು ನಿಜಕ್ಕೂ ವಿಷಾದನೀಯ. ಪ್ರಜಾಪ್ರಭುತ್ವದಲ್ಲಿ ಇದೆಲ್ಲ ನಡೆಯಲು ಹೇಗೆ ಸಾಧ್ಯ.? ಪರಿಕಲ್ಪನೆಯನ್ನು ಯಡಿಯೂರಪ್ಪನವರ ಬಳಿ ಒಂದು ಪ್ರಶ್ನೆ ಕೇಳಲು ನಾನು ಬಯಸುತ್ತೇನೆ, ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡಲು ನಿಮ್ಮ ಬಳಿ ದುಡ್ಡಿಲ್ವಾ..? ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

 

LEAVE A REPLY

Please enter your comment!
Please enter your name here