ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ರಸ್ತೆಗಿಳಿಯಲಿವೆ ಖಾಸಗಿ ‌ಬಸ್‌ಗಳು

ಲಾಕ್‌ ಡೌನ್‌ ಹಿನ್ನಲೆಯಲ್ಲಿ ಸ್ಥಬ್ದವಾಗಿದ್ದ ರಾಜ್ಯ ಈಗ ಮತ್ತೆ ಸಹಜ ಸ್ಥಿತಿಗೆ ಮರುಕಳಿಸಿದೆ. ರಾಜ್ಯದಲ್ಲಿ ಜನರು ಜಿಲ್ಲೆಗಳ ನಡುವೆ, ಜಿಲ್ಲೆಗಳ ಒಳಗೆ ಓಡಾಟ ಮಾಡಬಹುದು. ರಾಜ್ಯ-ರಾಜ್ಯಗಳ  ನಡುವೆಯೂ ಬಸ್‌ ಮತ್ತು ಖಾಸಗಿ ವಾಹನಗಳಲ್ಲಿ ಓಡಾಟಕ್ಕೆ ಅನುಮತಿ ಸಿಕ್ಕಿದೆ.

ಲಾಕ್‌ಡೌನ್‌ ಅವಧಿಯಲ್ಲಿ ವಿನಾಃ ಕಾರಣ ರಸ್ತೆ ತೆರಿಗೆ ಪಾವತಿಸಬೇಕಾದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಖಾಸಾಗಿ ಬಸ್‌ಗಳು ಪರವಾನಗಿಯನ್ನು ಆರ್‌ಟಿಒಗೆ ಸರೆಂಡರ್‌ ಮಾಡಿದ್ದವು.

ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜೂನ್‌ 1 ರಿಂದ ಖಾಸಗಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹೇಳಿದ್ದಾರೆ.

ಬರೋಬ್ಬರಿ ಎರಡೂವರೆ ತಿಂಗಳ ಬಳಿ ಎರಡೂ ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಪ್ರಾರಂಭವಾಗಲಿದ್ದು, ಶೇ.25 ರಷ್ಟು ಖಾಸಗಿ ಬಸ್‌ಗಳು ಸಂಚರಿಸಲಿದ್ದು, ಮುಂದಿನ ವಾರದೊಳಗೆ ಬಹುತೇಕ ಬಸ್‌ಗಳು ಓಡಾಟ ಆರಂಭಿಸಲಿವೆ ಎಂದು ಅವರು ಹೇಳಿದ್ದಾರೆ.

ಬಸ್ಸಿನಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ನಿಯಮಾವಳಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಶೇ.50 ಪ್ರಯಾಣಿಕರು, ಸ್ಯಾನಿಟೈಸೇಶನ್, ಮಾಸ್ಕ್ ನೊಂದಿಗೆ ಪ್ರಯಾಣ ಮಾಡುವುದು ಕಡ್ಡಾಯವಾಗಿದೆ.

ಸರ್ಕಾರದ ಜೊತೆ ನಡೆಸಿದ ಮಾತುಕತೆಯಂತೆ 15 ಶೇ. ಟಿಕೆಟ್ ‌ದರ ಹೆಚ್ಚಿಸಿ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಲಾಗಿದೆ.

ಅಂತೆಯೇ ಬಸ್ಸುಗಳಲ್ಲಿ ಯಾವುದೇ ರೀತಿಯ ವಿದ್ಯಾರ್ಥಿ ಹಾಗೂ ದಿನನಿತ್ಯದ ರಿಯಾಯತಿ ಟಿಕೆಟ್ ಪಾಸ್ ಇರುವುದಿಲ್ಲ.

ಪರಿಷ್ಕೃತ ದರ ಈ ರೀತಿ ಇದೆ
ಉಡುಪಿ – ಮಂಗಳೂರು – ರೂ. 67 (ಹಳೆ ದರ)- ರೂ. 80 (ಹೊಸ ದರ)
ಮಂಗಳೂರು-ಉಡುಪಿ-ಮಣಿಪಾಲ – ರೂ. 68 (ಹಳೆ ದರ) -ರೂ. 85(ಹೊಸ ದರ)
ಕಾರ್ಕಳ – ಪಡುಬಿದ್ರೆ- ಮಂಗಳೂರು – ರೂ. 55 (ಹಳೆ ದರ)-ರೂ. 65 (ಹೊಸ ದರ)
ಕುಂದಾಪುರ – ಮಂಗಳೂರು – ರೂ. 100(ಹಳೆ ದರ) -ರೂ. 120 (ಹೊಸ ದರ)
ಕುಂದಾಪುರ –ಉಡುಪಿ – ರೂ. 55 (ಹಳೆ ದರ) -ರೂ. 55 (ಹೊಸ ದರ)
ಕಾರ್ಕಳ- ಮೂಡಬಿದ್ರೆ – ಮಂಗಳೂರು – ರೂ. 52 (ಹಳೆ ದರ) – ರೂ. 62 (ಹೊಸ ದರ)
ಉಡುಪಿ-ಹಿರಿಯಡ್ಕ-ಕಾರ್ಕಳ – ರೂ. 40 (ಹಳೆ ದರ) -ರೂ. 45 (ಹೊಸ ದರ)

LEAVE A REPLY

Please enter your comment!
Please enter your name here