ಮಂಗಳೂರಿಗೆ ಹೊರಟ್ಟಿದ್ದ ಎರಡು ರೈಲುಗಳಲ್ಲಿ ಹಣ-ಆಭರಣ ದರೋಡೆ

ಮಂಗಳೂರಿಗೆ ಹೊರಟ್ಟಿದ್ದ ಎರಡು ರೈಲುಗಳಲ್ಲಿ ಇವತ್ತು ಪ್ರಯಾಣಿಕರನ್ನು ದರೋಡೆ ಮಾಡಲಾಗಿದ್ದು, ಚಿನ್ನ ಮತ್ತು ವಜ್ರದ ಆಭರಣಗಳು ಮತ್ತು 20 ಲಕ್ಷ ರೂಪಾಯಿ ನಗದನ್ನು ದೋಚಿದ್ದಾರೆ.

ಚೆನ್ನೈಯಿಂದ ಮಂಗಳೂರಿಗೆ ಹೊರಟ್ಟಿದ್ದ ಚೆನ್ನೈ-ಮಂಗಳೂರು ಸೂಪರ್‌ಫಾಸ್ಟ್‌ ಮತ್ತು ತಿರುವಂತಪುರಂ-ಮಂಗಳೂರು ನಡುವಿನ ಮಲಬಾರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದರೋಡೆ ನಡೆದಿದೆ. ಎರಡೂ ದರೋಡೆ ಕೃತ್ಯಗಳು ಎಸಿ ಕಂಪಾರ್ಟ್‌ಮೆಂಟ್‌ನಲ್ಲೇ ನಡೆದಿರುವುದು ವಿಶೇಷ.

ಚೆನ್ನೈ-ಮಂಗಳೂರು ರೈಲಿನಲ್ಲಿ ಕಣ್ಣೂರಿಗೆ ಮದುವೆಗಾಗಿ ಹೋಗುತ್ತಿದ್ದ ಮಹಿಳಾ ಪ್ರಯಾಣಿಕೆಯ ಬಳಿ ಇದ್ದ 15 ಲಕ್ಷ ರೂಪಾಯಿ ಮೊತ್ತದ ಆಭರಣ ಮತ್ತು 22 ಸಾವಿರ ರೂಪಾಯಿಯನ್ನು ಅಪರಿಚಿತ ವ್ಯಕ್ತಿಗಳು ದರೋಡೆ ಮಾಡಿದ್ದಾರೆ. ತ್ರಿಶೂರ್‌-ತಿರುಪೂರು ನಡುವೆ ಘಟನೆ ನಡೆದಿದೆ.

ಮತ್ತೊಂದು ಪ್ರಕರಣದಲ್ಲಿ ಸಿಂಗಾಪುರ್‌ನಿಂದ ಬಂದಿದ್ದ ಕುಟುಂಬವೊಂದು ಮಲಬಾರ್‌ ಎಕ್ಸ್‌ಪ್ರೆಸ್‌ನಲ್ಲಿ ಹೊರಟ್ಟಿತ್ತು. ಆದರೆ ಮಾಹೆ ಬಳಿ ಬರುತ್ತಿದ್ದಂತೆ 9.5 ಸವರಿನ್‌ ಆಭರಣ ಕಾಣೆ ಆಗಿರುವುದು ಗೊತ್ತಾಯಿತು.

ದರೋಡೆಕೋರರ ಪತ್ತೆಗೆ ರೈಲ್ವೆ ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here