ಭೂತಾರಾಧನೆ ಮಾಡುವ ದೈವ ನರ್ತಕರಿಗೆ ಮಾಸಾಶನ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: ‘ಕಾಂತಾರ’ ಚಿತ್ರದ ಮೂಲಕ ದಕ್ಷಿಣ ಕನ್ನಡದ ದೈವಾರಾಧನೆಯ‌ ಮಹತ್ವ ಜಗತ್ತಿನ ಮೂಲೆ ಮೂಲೆಯನ್ನು ತಲುಪುತ್ತಿದೆ. ಈ ನಡುವೆಯೇ ದೈವ ನರ್ತಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.

ದೈವ ನರ್ತನ ಮಾಡುತ್ತಿರುವ 60 ವರ್ಷ ತುಂಬಿದ ದೈವ ನರ್ತಕರಿಗೆ ಪ್ರತಿ ತಿಂಗಳು 2000 ರೂಪಾಯಿಗಳ ಮಸಾಶನ ನೀಡುವ ನಿರ್ಧಾರವನ್ನು ಘೋಷಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು, “ದೈವ ನರ್ತನ ಮಾಡುವವರ ದೊಡ್ಡ ಸಂಖ್ಯೆಯೇ ಇದೆ. ಪ್ರತಿ ವರ್ಷ ದೈವಾರಾಧನೆ ಮಾಡಿಕೊಂಡೇ ತಮ್ಮ ಕಸುಬು ನಡೆಸುತ್ತಿರುವ ಜನರು ಇದ್ದಾರೆ.

ಹೀಗಾಗಿ ದೈವ ನಟ್ಟನ ಮಾಡುತ್ತಿರುವ 60 ವರ್ಷ ಮೀರಿದವರಿಗೆ ಮಾಸಾಶನ ನೀಡುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಸಂಬಂಧಪಟ್ಟ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 2,000 ರೂಪಾಯಿಗಳ ಮಾಸಾಶನ ನೀಡಲಾಗುತ್ತದೆ” ಎಂದಿದ್ದಾರೆ.