ಭಾವಿ ಪತ್ನಿಗೆ ದುಬೈನಿಂದಲೇ ಹುಟ್ಟುಹಬ್ಬದ ಸಂದೇಶ ಕಳುಹಿಸಿದ ಚಾಹಲ್

ಬೆಂಗಳೂರು: ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರೀಗ ಯುಎಇಯಲ್ಲಿ ಆರ್‌ಸಿಬಿ ತಂಡದ ಪರ ಐಪಿಎಲ್‌ನಲ್ಲಿ ಆಡುವುದರಲ್ಲಿ ಬಿಜಿಯಾಗಿದ್ದಾರೆ.

ಈ ನಡುವೆ ಭಾವಿ ಪತ್ನಿ ಹಾಗೂ ಕೋರಿಯೋಗ್ರಾರ್ ಧನಶ್ರೀ ವರ್ಮ ಅವರ ಜನ್ಮದಿನವನ್ನು ಮರೆಯದೆ, ಭಾನುವಾರ ವಿಶೇಷ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

‘ಹ್ಯಾಪಿ ಬರ್ತ್‌ಡೇ ಲವ್! ನಿನ್ನ ಪಾಲಿನ ಈ ವಿಶೇಷ ದಿನ ಪ್ರೀತಿ ಮತ್ತು ಹಾರೈಕೆಗಳಿಂದ ತುಂಬಿರಲಿ. ಈ ದಿನವನ್ನು ಆನಂದಿಸು. ನಿನಗೆ ಯಾವುದು ಖುಷಿ ನೀಡುವುದೋ, ಅದು ನನಗೂ ಖುಷಿ ನೀಡುತ್ತದೆ ಎಂಬುದನ್ನು ನಾನು ಯಾವಾಗಲೂ ನಿನಗೆ ಹೇಳುತ್ತಿರುತ್ತೇನೆ. ಐ ಲವ್ ಯೂ’ ಎಂದು ಚಾಹಲ್ ಇನ್‌ಸ್ಟಾಗ್ರಾಂನಲ್ಲಿ ಧನಶ್ರೀ ಜತೆಗಿರುವ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಧನಶ್ರೀ, ಥ್ಯಾಂಕ್ ಯೂ ಮತ್ತು ಲವ್ ಯೂ ಎಂದು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here