ಭಾರತೀಯರಿಗೆ ಶುಭ ಸುದ್ದಿ.. ಸರ್ಕಾರದಿಂದ ಕೊರೋನಾ ಲಸಿಕೆ ಉಚಿತವಂತೆ..

ಭಾರತೀಯರಿಗೆ ಶುಭಸುದ್ದಿ. ಇಂದಿಗೆ ಸರಿಯಾಗಿ ಮುಂದಿನ 72 ದಿನಗಳಲ್ಲಿ ಕೊರೋನಾ ಲಸಿಕೆ ಲಭ್ಯ ಅಗಲಿದೆ. ಅಂದ್ರೆ ಅಕ್ಟೊಬರ್ ತಿಂಗಳ ಕೊನೆಯಲ್ಲಿ ಕೋವಿಶೀಲ್ಡ್ ಹೆಸರಿನ ಕೊರೋನಾ ಲಸಿಕೆ ಮಾರುಕಟ್ಟೆಗೆ ಬರಲಿದೆ ಎಂದು ಪುಣೆಯ ಸಿರಂ ಸಂಸ್ಥೆ ತಿಳಿಸಿದೆ. ಈ ಲಸಿಕೆಯನ್ನು ನ್ಯಾಷನಲ್ ಇಮ್ಯುನೈಜೇಷೆನ್ ಪ್ರೋಗ್ರಾಂ ಅಡಿಯಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ ಹಂಚಿಕೆ ಮಾಡಲಿದೆ ಎನ್ನಲಾಗಿದೆ.

ಭಾರತ ಸರ್ಕಾರ ನಮಗೆ ಪರವಾನಗಿ ನೀಡಿದೆ. ಇದರ ಅನ್ವಯ ನಾವು ಟ್ರಯಲ್ಸ್ ಪ್ರೊಟೋಕಾಲ್ ಪ್ರಕ್ರಿಯೆಗೆ ವೇಗ ನೀಡಿದ್ದೇವೆ. ಮುಂದಿನ 58 ದಿನಗಳಲ್ಲಿ ಈ ಟ್ರಯಲ್ಸ್ ಮುಗಿಯಲಿದೆ. ನಿನ್ನೆಯಿಂದಲೇ ಮೂರನೇ ಹಂತದಲ್ಲಿ ನೀಡಲ್ಪಡುವ ಮೊದಲ ಡೋಸ್ ಅನ್ನು ನಿನ್ನೆ ದೇಶದ 17 ಕಡೆ ನೂರಕ್ಕೂ ಹೆಚ್ಚು ಮಂದಿಗೆ ನಿನ್ನೆ ನೀಡಲಾಗಿದೆ. ಎರಡನೇ ಡೋಸ್ ಅನ್ನು 29 ದಿನಗಳ ನಮತರ ನೀಡಲಾಗುವುದು. ಎರಡನೇ ಡೋಸ್ ನೀಡಿದ 15 ದಿನಗಳ ಬಳಿಕ ಅಂತಿಮ‌ ಫಲಿತಾಂಶ ಲಭ್ಯ ಆಗಲಿದೆ. ಇದಾದ ಬಳಿಕ ಕೋವಿಶೀಲ್ಡ್ ಅನ್ನು ಮಾರುಕಟ್ಟೆಗೆ ಬಿಡಲಿದ್ದೇವೆ ಎಂದು ಸಿರಂ ತಿಳಿಸಿದೆ.

ಸಿರಂನಿಂದ ನೇರವಾಗಿ ಲಸಿಕೆ ಖರೀದಿಸಲು ಕೇಂದ್ರ ಸರ್ಕಾರ ಸುಳಿವು ನೀಡಿದೆ ಎನ್ನಲಾಗಿದೆ. ದೇಶವಾಸಿಗಳಿಗೆ ಉಚಿತವಾಗಿ ಲಸಿಕೆ ಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2022ರ ಒಳಗೆ ಈ ಸಂಸ್ಥೆಯಿಂದ 68 ಕೋಟಿ ಲಸಿಕೆ ಖರೀದಿಸಲು ಕೇಂದ್ರ ಸಜ್ಜಾಗಿದೆ ಅನ್ನೋದು ಮಾಹಿತಿ.

LEAVE A REPLY

Please enter your comment!
Please enter your name here