ಭಾರತದ ಕೋವಿಡ್, ಜಗತ್ತಿಗೆ ಆತಂಕ-ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ ಕಳೆದ ವರ್ಷ ಮೊದಲ ಬಾರಿ ಗುರುತಿಸಲಾದ ರೂಪಾಂತರಿತ ಕೊರೋನಾ ವೈರಾಣು ಬಿ.1.617 ಜಗತ್ತಿಗೆ ಆತಂಕವಾಗಿದೆ ಎಂದು ಸೋಮವಾರ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ಮರಿಯಾ ವಾನ್ ಕೆರ್ಕೊವೇ ಅವರು, ಭಾರತದ ರೂಪಾಂತರಿತ ಕೊರೋನಾ ವೈರಾಣು ಜಗತ್ತಿಗೆ ಆತಂಕವಾಗಿದೆ. ಇದು ಹೆಚ್ಚಿನ ಪ್ರಸರಣೆಯಾಗುವ ರೂಪಾಂತರಿತ ವೈರಾಣು ಆಗಿದೆ. ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಹೇಳಿದ್ದಾರೆ.

ಸೋಮವಾರದಂದು ಭಾರತದಲ್ಲಿ ದೈನಂದಿನ ಹೆಚ್ಚಿನ ಪ್ರಕರಣಗಳು ಹಾಗೂ ಹೆಚ್ಚಿನ ಸಾವುಗಳ ದಾಖಲಾಗಿವೆ. ವಿಶ್ವದ ಎರಡನೇ ಜನಸಂಖ್ಯೆಯುಳ್ಳ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಕರೆಗಳು ಬರುತ್ತಿವೆ.

ಭಾರತದ ರೂಪಾಂತರಿತ ವೈರಾಣು ಈಗಾಗಲೇ ಬೇರೆ ದೇಶಗಳಿಗೆ ಹರಡಿದೆ. ಆದ್ದರಿಂದ ಕೆಲವು ದೇಶಗಳು ಭಾರತದೊಂದಿಗಿನ ಪ್ರಯಾಣಿಕರ ಸಾಗಾಟವನ್ನು ನಿಯಂತ್ರಿಸಿವೆ.

ಭಾರತದ ರೂಪಾಂತರಿತ ವೈರಾಣುವಿನ ಬಗ್ಗೆ ಗುರುವಾರದಂದು ವಿಶ್ವಸಂಸ್ಥೆಯಲ್ಲಿ ಪೂರ್ಣ ವಿವರ ನೀಡಲಾಗುವುದು ಎಂದು ವಾನ್ ಕೆರ್ಕೊವೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here