ಭಾರತದ ಕತ್ತೆಗಳಿಗೆ ಚೀನಾದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್‌.. ಯಾಕ್‌ ಗೊತ್ತಾ..?

ಕತ್ತೆ ಎಂದರೆ ಸಾಕು ನಮಗೆ ನೆನಪಾಗುವುದು ಅಗಸ. ಬಾಲ್ಯದಿಂದಲೇ ನಾವು ಅಗಸ ಮತ್ತು ಕತ್ತೆ ಪಾಠಗಳನ್ನು ಓದಿರುತ್ತೇವೆ. ಕತ್ತೆ ದುಡಿದ ಹಾಗೆ ದುದಿಯುತ್ತೀಯಾ ಎಂದು ಹೇಳುವುದು ಉಂಟು. ಆದರೆ ಭಾರತದಲ್ಲಿರುವ ಕತ್ತೆಗಳು ಎಲ್ಲಿ ಹೋದವು..? ಯಾಕೆ ಈ ಪಶ್ನೆ ಎಂದರೆ ನಮ್ಮ ದೇಶದಲ್ಲಿ ಕತ್ತೆಗಳ ಸಂಖ್ಯೆ ಕಡಿಮೆ ಆಗುತ್ತಿದ್ಯಂತೆ.

ವರದಿಯೊಂದರ ಪ್ರಕಾರ ೨೦೦೭ರಿಂದ ೨೦೧೨ರವರೆಗೆ ಅಂದರೆ ೫ ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಕತ್ತೆಗಳ ಸಂಖ್ಯೆ ಶೇಕಡಾ ೨೩ರಷ್ಟು, ೨೦೧೨-೨೦೧೯ರವರೆಗೆ ಶೇಕಡಾ ೬೧.೨೩ರಷ್ಟು ಕಡಿಮೆ ಅಗಿದ್ಯಂತೆ. ಅಂದರೆ ಈಗ ನಮ್ಮ ದೇಶದಲ್ಲಿರುವ ಕತ್ತೆಗಳ ಸಂಖ್ಯೆ ಕೇವಲ ೧ ಲಕ್ಷದ ೨೦ ಸಾವಿರ ಅಷ್ಟೇ.

ಆದರೆ ಒಂದು ವರದಿಯ ಪ್ರಕಾರ ಭಾರತದಲ್ಲಿನ ಕತ್ತೆಗಳನ್ನು ಚೀನಾಕ್ಕೆ ಕದ್ದು ಮಾರಾಟ ಮಾಡಲಾಗುತ್ತಿದ್ದಂತೆ. ಅದೂ ಯಾಕೆ ಗೊತ್ತಾ..?

ಚೀನಾದಲ್ಲಿ ಇಜ್ಯುವೋ ಹೆಸರಿನ ಸಂಪ್ರದಾಯಿಕ ಔಷಧವನ್ನು ತಯಾರು ಮಾಡುತ್ತಾರೆ. ಈ ಔಷಧಿಯ ತಯಾರಿಕೆಗೆ ಬಳಸುವುದು ಕತ್ತೆಗಳ ಚರ್ಮವನ್ನು. ಆದರೆ ಚೀನಾದಲ್ಲಿ ಕತ್ತೆಗಳ ಸಂಖ್ಯೆ ಇಳಿದಿರುವ ಹಿನ್ನೆಲೆಯಲ್ಲಿ ಭಾರತದಿಂದ ಕಳ್ಳಸಾಗಾಣಿಕೆ ಮಾಡಲಾಗುತ್ತಿದ್ಯಂತೆ.

ಚೀನಾದಲ್ಲಿ ಇಜ್ಯುವೋ ಔಷಧಿ ತಯಾರಿಕೆಗೆ ವರ್ಷದಲ್ಲಿ ಬೇಕಾಗಿರುವ ಕತ್ತೆಗಳ ಸಂಖ್ಯೆ ಬರೋಬ್ಬರೀ ೪೮ ಲಕ್ಷ. ಆದರೆ ಚೀನಾದಲ್ಲಿ ಸದ್ಯ ಇರುವ ಕತ್ತೆಗಳ ಸಂಖ್ಯೆ ಕೇವಲ ೨೬ ಲಕ್ಷ.  ಹೀಗಾಗಿ ಹೊರದೇಶಗಳಿಂದಲೂ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತದೆ ಚೀನಾ.

ಚೀನಾದಲ್ಲಿ ವಾರ್ಷಿಕವಾಗಿ ೫,೬೦೦ ಟನ್‌ನ್ನಷ್ಟು ಇಜ್ಯುವೋ ಔಷಧವನ್ನು ತಯಾರು ಮಾಡಲಾಗುತ್ತದೆ. ಒಣಕಫ, ನಿದ್ರಾಹೀನತೆ, ರಕ್ತಸ್ರಾವ, ತಲೆಸುತ್ತುವಂತಹ ಕಾಯಿಲೆಗೆ ಮದ್ದು. ಜೊತೆಗೆ ಚೀನಾದಲ್ಲಿ ಕೇಕ್‌ ಮುಂತಾದ ಸ್ನ್ಯಾಕ್‌ಗಳ ತಯಾರಿಕೆಯಲ್ಲೂ ಕತ್ತೆಗಳ ಚರ್ಮಗಳಿಂದ ಸಿಗುವ ಝೆಲೈಟನ್‌ನ್ನು ಬಳಸುತ್ತಾರೆ.

LEAVE A REPLY

Please enter your comment!
Please enter your name here