ಭಾರತದಲ್ಲಿ 10 ಸಾವಿರ ಉದ್ಯೋಗಗಳ ಕಡಿತ – ಆಘಾತಕೊಟ್ಟ ಕಂಪನಿ

ಆಟೋ ಬಿಡಿಭಾಗಗಳ ತಯಾರಿಕೆಯಲ್ಲಿ ವಿಶ್ವದಲ್ಲಿ ಅತೀ ದೊಡ್ಡ ಕಂಪನಿ ಆಗಿರುವ ಬಾಷ್‌ ಭಾರತದಲ್ಲಿ ತನ್ನ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಕ್ಕೂ ಹೆಚ್ಚು ನೌಕರರನ್ನು ತೆಗೆದು ಹಾಕುವ ಬಗ್ಗೆ ಘೋಷಣೆ ಮಾಡಿದೆ.

ಜರ್ಮನಿ ಮೂಲದ ಕಂಪನಿ ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಶೇಕಡಾ 10 ರಷ್ಟು ಅಂದರೆ 3,700 ಮತ್ತು 6,300 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಿದೆ ಎಂದು ಬಾಷ್‌ ಇಂಡಿಯಾದ ಎಂಡಿ ಆಗಿರುವ ಸೌಮಿತ್ರಾ ಭಟ್ಟಾಚಾರ್ಯ ಹೇಳಿದ್ದಾರೆ.

ವಾಹನ ಮಾರಾಟ ಇಳಿಕೆಯಿಂದಾಗಿ ವಿಶ್ವದಲ್ಲೆಡೆ 80 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 2019 ರಲ್ಲಿ ಭಾರತದಲ್ಲಿ ಪಾತಾಳಕ್ಕೆ ಕುಸಿದಿರುವ ವಾಹನಗಳ ಮಾರಾಟ ಸುಧಾರಿಸಲು ಇನ್ನೂ ಎರಡ್ಮೂರು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

2019ರ ಸೆಪ್ಟೆಂಬರ್‌ರ ಮಾಹಿತಿಗಳ ಪ್ರಕಾರ ಬಾಷ್‌ ಇಂಡಿಯಾದ ಲಾಭ 2018 ಕ್ಕೆ ಹೋಲಿಸಿದ್ರೆ ಶೇಕಡಾ 66 ರಷ್ಟು ಕುಸಿದಿದೆ. ಅಲ್ಲದೇ ಷೇರು ಮಾರುಕಟ್ಟೆಗಳಲ್ಲಿ ಬಾಷ್‌ ಷೇರುಗಳ ಮೌಲ್ಯ ಶೇಕಡಾ 22 ರಷ್ಟು ಇಳಿಕೆ ಆಗಿದೆ.

LEAVE A REPLY

Please enter your comment!
Please enter your name here